ವಿಮಾನದ ಮೂಲಕ ‘ಐಕಾನ್ ಉಪಗ್ರಹ ಉಡಾವಣೆ

  • ಉತ್ತನೂರು ವೆಂಕಟೇಶ್

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭೂಮಿಯ ಅತೀ ಮೇಲ್ಮೆ ವಾತಾವರಣ ಐಯನೊಸ್ಪಿಯರ್ ವಲಯದ ಶೋಧನೆಗೆಂದು ಐಯನೊಸ್ಪಿಯರಿಕ್ ಕನೆಕ್ಷನ್ ಎಕ್ಸ್‌ಪ್ಲೋರರ್ (ಐಸಿಒನ್) ಉಪಗ್ರಹವನ್ನು ನವೆಂಬರ್ ೭ರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಪ್ಲಾರಿಡಾದ ಕೇಫ್ ಕಾನರವೆಲ್ ವಾಯುನೆಲೆಯಿಂದ ಐಕಾನ್ ಬಾಹ್ಯಾಕಾಶ ನೌಕೆಯನ್ನು ಹೊತ್ತಿದ್ದ ಪೆಗಾ ಸೂಸ್ ಎಕ್ಸ್- ಘಿಐ ರಾಕೆಟ್ ಅನ್ನು ವಿಮಾನದ ಮೂಲಕ ಇಳಿಬಿಡಲಾಗಿದೆ.

ಉಪಗ್ರಹ ಹೊತ್ತಿದ್ದ ರಾಕೆಟ್ ಅನ್ನು ೪೦,೦೦೦ ಅಡಿಗಳ ಎತ್ತರದವರೆಗೂ ಕೊಂಡೊಯ್ದ ಸ್ಟಾರ್ ಗೇಜರ್ ಎಲ್-೧೦೧೧ ವಿಮಾನ, ರಾಕೆಟ್‌ನ ಮೊದಲ ಇಂಜಿನ್ ಉರಿಯುವುದಕ್ಕೆ ೫ ಸೆಕೆಂಡ್ ಇರುವಂತೆ ಅದನ್ನು ತನ್ನಿಂದ ಬಿಡುಗಡೆಗೊಳಿಸಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

ಭೌತಿಕ ಲಕ್ಷಣಗಳಿಗೆ ಅನುಗುಣವಾಗಿ ಭೂಮಿ ಮೇಲ್ಮೈ ವಾತಾವರಣದಲ್ಲಿ ೪ ಪದರಗಳಾಗಿ ವಿಗಂಡಿಸಲಾಗಿದೆ.

ಟೋಪೋಸ್ಪಿಯರ್ ಸ್ಟ್ರಾಟೋ ಸ್ಪಿಯರ್, ಮೀಸೋ ಸ್ಪಿಯರ್, ಐಯನೋಸ್ಪಿಯರ್, ಮತ್ತು ಎಕ್ಸೊಸ್ಪಿಯರ್, ಮಿಸೋಸ್ಪಿಯರ್ ನ ಮೇಲು ಭಾಗದ ವಾತಾವರಣವೇ ಐಯೋನೋಸ್ಪಿಯರ್ ಹುರಿಕೇನ್, ಜ್ವಾಲಾಮುಖಿ ಇತ್ಯಾದಿ. ಪ್ರಕೃತಿ ವಿಕೋಪಕ್ಕೆ ಈ ವಾತಾರವಣ ಹೇಗೆ ಸ್ಪಂದಿಸುತ್ತವೆ ಎಂಬುದರ ಅಧ್ಯಯನವೇ ಈ ಯಾನದ ಮುಖ್ಯ ಉದ್ದೇಶ.

ಕೇಫ್ ಕಾನರವೆಲ್ ವಾಯುನೆಲೆಯಲ್ಲಿ ೯೦ ನಿಮಿಷಗಳ ಕಾಲ ನಡೆದ ಈ ಉಡಾವಣಾ ಕಾರ್ಯ ಬೆಳಗಿನ ಜಾವಾ ೩.೩೦ಕ್ಕೆ ಪ್ರಾರಂಭವಾಗಿ ನವೆಂಬರ್ ೭ ಮುಂಜಾನೆ ಉಡಾವಣಾ ಕಾರ್ಯ ಯಶಸ್ವಿಯಾಗಿದೆ.

11vichar2

ಈಗ ಉಡಾವಣೆ ಗೊಂಡಿರುವ ‘ಐಕಾನ್‘ ಬಾಹ್ಯಾಕಾಶ ನೌಕೆ ಈ ಹಿಂದೆ ಇದೇ ವರ್ಷದ ಜನವರಿಯಲ್ಲಿ ಉಡಾವಣೆಯಾಗಿರುವ ಇದೇ ಉದ್ದೇಶದ ಉಪಗ್ರಹ ಗೋಲ್ಡ್ (ಜಿಒಎಲ್‌ಡಿ)ನೊಂದಿಗಿನ ಸಂಪರ್ಕದಲ್ಲಿ ಐಯನೋಸ್ಪಿಯರ್ ವಾತಾವರಣದ ಅಧ್ಯಯನ ನಡೆಸಲಿದೆ.

ಹಿಂದೆ ಉಡಾವಣೆಯಾಗಿರುವ ಗೋಲ್ಡ್ ಬಾಹ್ಯಾಕಾಶ ನೌಕೆ ಭೂಮಿಯಿಂದ ೨೨,೦೦೦ ಮೈಲುಗಳ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಿನ ಉಪಗ್ರಹ ‘ಐಕಾನ್‘ ಭೂಮಿಯಿಂದ ೩೫೭ ಮೈಲುಗಳ ಎತ್ತರದ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಈ ಎರಡೂ ಉಪಗ್ರಹಗಳು ಸಂಯುಕ್ತವಾಗಿ ಭೂಮಿಯ ಅತ್ಯಂತ ಮೇಲು ಪದರ ವಾಯುವಲಯದ ಶೋಧನೆ ನಡೆಸುತ್ತವೆ.

ಗೋಲ್ಡ್ ಉಪಗ್ರಹ ಅತಿ ಎತ್ತರದಿಂದ ಐಯನೋಸ್ಪಿಯರ್ ವಲಯದ ಮೇಲೆ ಕಣ್ಣಿಟ್ಟು ಅದರ ಛಾಯಾ ಚಿತ್ರಗಳನ್ನು ತೆಗೆದರೆ ಐಕಾನ್ ಅತಿ ಕೆಳಗಿನ ಎತ್ತರದಲ್ಲಿ ಹಾಗೂ ಅತಿ ಸಮೀಪದಲ್ಲಿ ಐಯನೋಸ್ಪಿಯರ್‌ನಲ್ಲಿ ನಡೆಯುವ ಆಯಸ್ಕಾಂತೀಯ ಮತ್ತು ವಿಕಿರಣ ಪ್ರಭಾವಿತ ತರಂಗಗಳ ಚಿತ್ರಗಳನ್ನು ತೆಗೆಯುತ್ತದೆ ಎಂದು ನಾಸಾದ ಹೆಲಿಯೋ ಫಿಸಿಕ್ಸ್ ವಿಭಾಗದ ನಿರ್ದೇಶಕ ನಿಕೋಲಾ ಫಾಕ್ಸ್ ಹೇಳಿದ್ದಾರೆ.

ಭೂಮಿಯ ಮೇಲಿನ ಅತ್ಯಂತ ಎತ್ತರದ ವಾತಾವರಣವಾದ ಐಯನೋಸ್ಪಿಯರ್ ಭೂಮಿ ಮತ್ತು ಬಾಹ್ಯಾಕಾಶಕ್ಕೆ ಸಂದಿಸುವ ಭಾಗವಾಗಿದೆ. ಭೂಮಿ ಮತ್ತು ಬಾಹ್ಯಾಕಾಶದ ಗಡಿಯಲ್ಲಿರುವ ಈ ವಾತಾವರಣ ಭೂಮಿಯಿಂದ ೯೬ ಕಿ.ಮೀ. ಎತ್ತರದಲ್ಲಿದೆ.

ಭೂಮಿಯ ಅತಿ ಮೇಲ್ಮೆ ವಾತಾವರಣ ಪದರವಾದ ಐಯನೋಸ್ಪಿಯರ್‌ನಲ್ಲಿ ವಿದ್ಯುತ್ ಕಣಗಳಿದ್ದು, ಈ ಕಣಗಳು ರೇಡಿಯೋ ತರಂಗಾಂತರಗಳನ್ನು ಭೂಮಿಯತ್ತ ಕಳುಹಿಸಿ, ರೇಡಿಯೋ ಸಂಪರ್ಕಕ್ಕೆ ಅನುಕೂಲ ಮಾಡುತ್ತದೆ.

ಹೀಗಾಗಿ ಈ ವಲಯ ವಾತಾವರಣದ ಮೇಲೆ ಸೂರ್ಯನ ಅತಿ ನೇರಳೆ ಕಿರಣಗಳು, ಭೂಮಿಯ ಆಯಸ್ಕಾಂತೀಯ ಬಿರುಗಾಳಿ ಇತ್ಯಾದಿಗಳು ಈ ವಲಯದ ವಾತಾವರಣದ ಮೇಲೆ ಬೀರುವ ಪರಿಣಾಮಗಳು ಮತ್ತು ಇದಕ್ಕೆ ಆ ವಾತಾವರಣದ ಸ್ಪಂದನೆ ಇತ್ಯಾದಿಗಳ ಅಧ್ಯಯನವೇ ಐಕಾನ್ ಬಾಹ್ಯಾಕಾಶ ಯಾನದ ಮುಖ್ಯ ಉದ್ದೇಶ.

Leave a Comment