ವಿಮಾನದಲ್ಲಿ ಏಕಾಂಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬಂದ ಐದರ ಪೋರ

ಬೆಂಗಳೂರು, ಮೇ 25- ಲಾಕ್ ಡೌನ್ ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಐದು ವರ್ಷದ ಪೋರನೋರ್ವ ಏಕಾಂಗಿಯಾಗಿ ಪ್ರಯಾಣ ಬೆಳೆಸಿ ತಾಯಿ ಮಡಿಲು ಸೇರಿದ ಪ್ರಸಂಗ ನಡೆದಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾಗುವುದಕ್ಕೆ ಮುನ್ನವೇ ಐದು ವರ್ಷದ ಬಾಲಕ ದೆಹಲಿಯಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದನು. ನಂತರ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಆತ ಸುಮಾರು ಮೂರು ತಿಂಗಳು ದೆಹಲಿಯಲ್ಲಿಯೇ ತಂಗಿದ್ದನು. ಅಧಿಕಾರಿಗಳು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಾಲಕನನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.

ಸೋಮವಾರ ಮೊದಲ ಬಾರಿಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ಬಾಲಕ ಇತರ ಪ್ರಯಾಣಿಕರ ಜೊತೆಗೆ ಒಬ್ಬನೇ ಪ್ರಯಾಣ ಬೆಳೆಸಿದ್ದಾನೆ.

ವಿಮಾನ ನಿಲ್ದಾಣದಲ್ಲೇ ಪುತ್ರನ ಬರುವಿಕೆಗಾಗಿ ಕಾದುಕುಳಿತಿದ್ದ ಆತನ ತಾಯಿ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

Share

Leave a Comment