ವಿಭಿನ್ನ ಸ್ಪರ್ಧೆಗಳ ಮೂಲಕ ಮತದಾನ ಜಾಗೃತಿ ಉತ್ಸವ

ದಾವಣಗೆರೆ ಏ.16; ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಮೂಹ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ವಿವಿ ಲಲಿತಕಲಾ ಮಹಾವಿದ್ಯಾಲಯ, ಹಿಮಾಲಯನ್ ಅಡ್ವೆಂಚರ್ ಅಂಡ್ ಸ್ಪೋರ್ಟ್ ಇವರ ಸಹಯೋಗದೊಂದಿಗೆ ಏ.18 ರಂದು ಸಂಜೆ 4 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಮತದಾರರ ಜಾಗೃತಿ ಉತ್ಸವ – 2019ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಚಟುವಟಿಕೆಗಳು;
ಸಾಮೂಹಿಕ ಚಿತ್ರರಚನೆ: ದಾವಣಗೆರೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರಿಂದ ಬೃಹತ್ ಬ್ಯಾನರ್ ಬಟ್ಟೆಯಲ್ಲಿ ಮತದಾನ ಜಾಗೃತಿ ಚಿತ್ರರಚನೆ ಮಾಡುವರು.
ಭಿತ್ತಿ ಚಿತ್ರ ರಚನಾ ಸ್ಪರ್ಧೆ: ದಾವಣಗೆರೆಯ ವಿವಿ ಲಲಿತಕಲಾ ಕಾಲೇಜಿನ ಆಹ್ವಾನಿತ 30 ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಭಿತ್ತಿಚಿತ್ರ ರಚನಾ ಸ್ಪರ್ಧೆ.
ಗ್ರಾಮೀಣ ಕ್ರೀಡೆಗಳ ಸ್ಪರ್ಧೆ: ವಿವಿಧ ಪದವಿ ಕಾಲೇಜುಗಳ ತಂಡಗಳಿಗೆ ವಿವಿಧ ಕಾರ್ನರ್‍ಗಳಲ್ಲಿ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಗಳಾದ ಹಗ್ಗ-ಜಗ್ಗಾಟ (ಗುಂಪು) (ಪುರುಷ & ಮಹಿಳೆಯರಿಗೆ), ಮಡಿಕೆ ಹೊಡೆಯುವುದು (ವೈಯುಕ್ತಿಕ) (ಪುರುಷ & ಮಹಿಳೆಯರಿಗೆ), ಮಡಿಕೆ ಹೊಡೆಯುವುದು (ವೈಯುಕ್ತಿಕ) (ಪುರುಷ & ಮಹಿಳೆಯರಿಗೆ).
ರಂಗೋಲಿ ಸ್ಪರ್ಧೆ : ವಿದ್ಯಾರ್ಥಿನಿಯರು, ಮಹಿಳೆಯರಿಗೆ ಮತದಾನ ಜಾಗೃತಿ ಸಂದೇಶದೊಂದಿಗೆ ರಂಗೋಲಿ ರಚನಾ ಸ್ಪರ್ಧೆ.
ಮತದಾನ ಜಾಗೃತಿ ಗಾಯನ: ವೇದಿಕೆಯಲ್ಲಿ ಆಗಾಗ್ಗೆ ಸಂಗೀತ ಕಲಾವಿದರಿಂದ ಮತದಾನ ಜಾಗೃತಿ ಗೀತೆಗಳ ಗಾಯನ ಹಮ್ಮಿಕೊಳ್ಳುವುದು.
ಜಾನಪದ ತಂಡಗಳ ಪ್ರದರ್ಶನ : ಉತ್ಸವದ ವಾತಾವರಣ ನಿರ್ಮಾಣ ಮಾಡಲು ಆವರಣದಲ್ಲಿ ಕಲಾವಿದರಿಂದ ಜಾನಪದ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳುವುದು.
ಮೆಹಂದಿ ಸಂಭ್ರಮ : ಮೆಹಂದಿ ಕಾರ್ನರ್‍ನಲ್ಲಿ ಆಸಕ್ತ ವಿದ್ಯಾರ್ಥಿನಿಯರು, ಮಹಿಳೆಯರು ಪರಸ್ಪರ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಬಹುದು.
ಸ್ಕಿನ್ ಆರ್ಟ್: ನಾಲ್ಕು ಜನ ಕಲಾವಿದರು, ಅಲ್ಲಿ ಪಾಲ್ಗೊಂಡಿರುವ ಆಸಕ್ತರಿಗೆ ಅಕ್ರಾಲಿಕ್ ಬಣ್ಣದಲ್ಲಿ ಕೈ ಮೇಲೆ, ಮುಖದ ಮೇಲೆ ಭಾರತದ ಬಾವುಟ, ಕನ್ನಡದ ಬಾವುಟದ ವರ್ಣರಚನೆ ಮಾಡುವುದು. ಇದು ಕಾರ್ಯಕ್ರಮದ ಮೆರಗು ಹೆಚ್ಚಿಸುವುದು.
ಹಬ್ಬದ ವಾತಾವರಣ ನಿರ್ಮಾಣ : ಕಾರ್ಯಕ್ರಮ ನಡೆಯುವ ಆವರಣದಲ್ಲಿ ಸ್ವೀಪ್ ಲೋಗೋ ಇರುವ ಪೇಪರ್ ಬಂಟಿಂಗ್ಸ್, ಪೋಸ್ಟರ್ಸ್, ಬ್ಯಾನರ್ಸ್‍ಗಳಿಂದ ಉತ್ಸವದ ವಾತಾವರಣ ನಿರ್ಮಿಸುವುದು.
ಸಾಹಸ ಕ್ರೀಡಾ ಚಟುವಟಿಕೆಗಳು : ಆವರಣದಲ್ಲಿ ಎರಡು ರೋಪ್ ಅಡ್ವೆಂಚರ್ ಚಟುವಟಿಕೆಗಳನ್ನು ಹಮ್ಮಿಕೊಂಡು ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡಲಾಗುವುದು.
ಚಟುವಟಿಕೆಗಳನ್ನು ಸಂಘಟಿಸುವ ಕಾರ್ಯಕರ್ತರಿಗೆ ಸ್ವೀಪ್ ಲೋಗೋ ಇರುವ ಟೀ ಶರ್ಟ್, ಭಾಗವಹಿಸುವ ಕಲಾವಿದರು, ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ, ಕ್ಯಾಪ್, ಕುಡಿಯುವ ನೀರು ಹಾಗೂ ಲಘು-ಉಪಹಾರದ ವ್ಯವಸ್ಥೆ ಮಾಡಲಾಗುವುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment