ವಿಭಿನ್ನತೆಯ ಪರಚಂಡಿ

ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಹೊಸಬರೇ ಹೆಚ್ಚಾಗಿ ಬರುತ್ತಿದ್ದು ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳುವ ಮಹಾದಾಸೆ ಹೊಂದಿದ್ದಾರೆ. ’ಪರಚಂಡಿ’ ಚಿತ್ರದ ಮೂಲಕ ನಾಯಕ ಮಹೇಶ್ ದೇವು, ನಾಯಕಿ  ಕಲ್ಪನಾ ಪ್ರಮುಖ ಖಳನಟ ಶಿವಾಜಿ ಸೇರಿದಂತೆ ಮತ್ತಿತರ ಕಲಾವಿದರಿಗೆ ಚಿತ್ರ ಹೊಸದೊಂದು ಮೈಲಿಗಲ್ಲು ನೀಡಲಿದೆ ಎನ್ನುವ ವಿಶ್ವಾಸದಲ್ಲಿ ಚಿತ್ರದ ಕಲಾವಿದರಿದ್ದಾರೆ.

ಕಳೆದವಾರ ಚಿತ್ರದ ಬಗ್ಗೆ ಹೇಳಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಅಲ್ಲಿ ಮೊದಲು ಮಾತಿಗಿಳಿದ ನಿರ್ಮಾಪಕ ಕೆ.ಸಿ ಶಿವಾನಂದ, ಹೊಸಬರ ತಂಡ ಸೇರಿಕೊಂಡು ಒಳ್ಳೆಯ ಚಿತ್ರ ಮಾಡಿದ್ದೇವೆ. ಈ ಚಿತ್ರದ ಮೂಲಕ ಎಲ್ಲರಿಗೂ ನೆಲೆ ಸಿಗಲಿದೆ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಬಂಡವಾಳ ಹಾಕಿದ್ದೇವೆ. ಚಿತ್ರವೂ ಚೆನ್ನಾಗಿ ಮೂಡಿ ಬಂದಿದೆ, ಇನ್ನು ನಿಮ್ಮೆಲ್ಲರ ಸಹಕಾರ ಮತ್ತೆ ಬೆಂಬಲ ಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ಜೂಮ್ ರವಿ, ಮೊದಲ ಚಿತ್ರ, ಚಂಡಿ ಹಿಡಿಯುವ ಮಕ್ಕಳಿಗೆ ಪರಚಂಡಿ ಎಂದು ಕರೆಯುತ್ತಾರೆ. ಚಿತ್ರದಲ್ಲಿ ನಾಯಕ ಚಂಡಿ ಹಿಡಿಯುತ್ತಾನಾ ಇಲ್ಲವೇ ನಾಯಕಿ ಚಂಡಿ ಹಿಡಿಯುತ್ತಾಳಾ ಎನ್ನುವುದು ಚಿತ್ರದ ಕುತೂಹಲ.  ಚಿತ್ರದಲ್ಲಿ ಎಂಟು ಹೊಡೆದಾಟದ ಸನ್ನಿವೇಶಗಳಿವೆ. ಅವುಗಳೆಲ್ಲವೂ ಸನ್ನಿವೇಶದ ಜೊತೆಗೆ ಸಾಗಿವೆ. ಸನ್ನಿವೇಶ ನಡೆಯುತ್ತಲೇ ಹೊಡೆದಾಟದ ಸನ್ನಿವೇಶವೂ ಇರಲಿದೆ. ಇದೊಂದು ವಿಭಿನ್ನಬಗೆಯ ಚಿತ್ರವಾಗಲಿದೆ. ಚಿತ್ರದಲ್ಲಿ ಗ್ರಾಮೀಣ ಸೊಗಡಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರ ನೋಡಿದ ಮಂದಿಗೆ ಬೇಸರವಾಗುವುದಿಲ್ಲ ಎನ್ನುವ ಭರವಸೆ ನೀಡಿದರು.

ಚಿತ್ರದಲ್ಲಿ ಪ್ರಮುಖ ಖಳನಟ, ಶಿವಾಜಿ, ವ್ಯಕ್ತಿ ಒಬ್ಬ ಚಿತ್ರದಲ್ಲಿ ಐದು ವಿಭಿನ್ನ ಬಗೆಯ ಪಾತ್ರ ಮಾಡಿದ್ದೇನೆ. ಒದೊಂದು ಪಾತ್ರವೂ ಒದೊಂದು ರೀತಿ ಮೂಡಿ ಬಂದಿದೆ. ನಿರ್ಮಾಪಕರು ಚಿತ್ರಕ್ಕೆ ಎಲ್ಲಿಯೂ ಕೊರತೆಯಾಗದಂತೆ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿಕೊಂಡರು.

ನಾಯಕ ಮಹೇಶ್ ದೇವು, ಮೊದಲ ಚಿತ್ರ, ಒಳ್ಳೆಯ ಪಾತ್ರ ಸಿಕ್ಕಿದೆ, ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ಒಳ್ಳೆಯ ನೆಲೆ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರೆ, ನಾಯಕಿ ಕಲ್ಪನಾ, ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದೆ., ಈ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ಪಾತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಒಂದು ಸೀರೆಯಲ್ಲಿ ೨೦ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇನೆ ಎಂದರು.

ಚಿತ್ರಕ್ಕೆ ಕ್ಯಾಮರ ಹಿಡಿದಿರುವ ರಾಜ್ ಕಡೂರ್, ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ. ಈ ಚಿತ್ರದ ಬಳಿಕ ಮೂರು ನಾಲ್ಕು ಚಿತ್ರಗಳಿಗೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಂಡರು. ಇದೇ ವೇಳೆ ಚಿತ್ರದ ಬಗ್ಗೆ ಹಲವು ಕಲಾವಿದರು ತಂತ್ರಜ್ಞರು ಮಾಹಿತಿ ಹಂಚಿಕೊಂಡರು.

Leave a Comment