ವಿನಯ್ ಬಿ.ಪಾಟೀಲ್ : ಬಿಎಸ್ಸಿ ಪದವಿ ರದ್ದು – 10 ಲಕ್ಷ ದಂಡ

ಕೃಷಿ ವಿಶ್ವವಿದ್ಯಾಲಯ : ಕೃಷಿ ಖೊಟ್ಟಿ ಪದವಿ ವಿರುದ್ಧ ಸಂಚಲನ ನಿರ್ಧಾರ
ರಾಯಚೂರು.ಮೇ.25- ಕೃಷಿ ಕೋಟಾದಡಿ ಕೃಷಿ ವಿಶ್ವವಿದ್ಯಾಲಯದ ಬಿಎಸ್ಸಿ ಪದವಿ ಪ್ರವೇಶ ಪಡೆದ ಡಾ.ವಿನಯ್ ಬಿ.ಪಾಟೀಲ್ ತಂದೆ ಡಾ.ಬಿ.ವಿ.ಪಾಟೀಲ್ ಅವರ ಪದವಿ ಪ್ರಮಾಣ ಪತ್ರಗಳನ್ನು ತಕ್ಷಣದಿಂದಲೇ ಜಾರಿ ಬರುವಂತೆ ರದ್ದುಗೊಳಿಸಿ 10 ಲಕ್ಷ ದಂಡ ವಿಧಿಸಿ, ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಎಂ.ಜಿ.ಪಾಟೀಲ್ ಅವರು ಸಂಚಲನಾತ್ಮಕ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಕೃಷಿ ಕೋಟಾದಡಿ ಖೊಟ್ಟಿ ದಾಖಲೆ ಮೂಲಕ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳಲ್ಲಿ ನಡುಕ ಹುಟ್ಟಿಸಿದೆ. ಸುಧೀರ್ಘ ನ್ಯಾಯಾಲಯದ ಸಂಘರ್ಷದೊಂದಿಗೆ ಕೊನೆಗೂ ವಿಶ್ವವಿದ್ಯಾಲಯ ನ್ಯಾಯಾಲಯ ಆದೇಶಕ್ಕೆ ಮಣಿದು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸುವ ಮೂಲಕ ಖೊಟ್ಟಿ ಆಧಾರದಲ್ಲಿ ಪ್ರವೇಶ ಪಡೆದವರಿಗೆ ಶಾಕ್ ನೀಡಿದೆ.
ಡಾ.ವಿನಯ್ ಬಿ.ಪಾಟೀಲ್ ತಂದೆ ಬಿ.ವಿ.ಪಾಟೀಲ್ ಅವರ ವಿರುದ್ಧ ರಾಜ್ಯ ಹೈಕೋರ್ಟ್ ಮತ್ತು ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಲಾಗಿತ್ತು. ಟಿ.ಮಾರೆಪ್ಪ ಇವರು ಬಿ.ವಿ.ಪಾಟೀಲ್ ಅವರು ತಮ್ಮ ಪುತ್ರನನ್ನು ಕೃಷಿ ಕೋಟಾದಡಿ ಬಿಎಸ್ಸಿ ಕೃಷಿ ಪದವಿಗೆ ಪ್ರವೇಶ ಪಡೆದಿದ್ದರು. ಈ ಪ್ರವೇಶಕ್ಕೆ ಸಂಬಂಧಿಸಿ ಅವರು ಸಲ್ಲಿಸಿದ್ದ ದಾಖಲೆಗಳು ಖೊಟ್ಟಿಯಾಗಿರುವುದು ಖಚಿತಗೊಂಡಿತು.
ಈ ಕುರಿತು ನ್ಯಾಯಾಲಯ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಲಾಗಿತ್ತು. ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಸೇವೆ ಮತ್ತು ಸಮನ್ವಯ ಅಧೀನ ಕಾರ್ಯದರ್ಶಿ ಹೆಚ್.ಎನ್.ಲಕ್ಷ್ಮಣಗೌಡ ಅವರು ಸೂಚಿಸಿದ್ದರು. ಈ ಸೂಚನೆಯನ್ನಾಧರಿಸಿ, ಮೇ.22 ರಂದು ವಿಶ್ವವಿದ್ಯಾಲಯ ಕುಲಪತಿ ಅನುಮೊದನೆನನ್ವಯ ಕುಲ ಸಚಿವರು ಡಾ.ವಿನಯ್ ಬಿ.ಪಾಟೀಲ್ ಅವರಿಗೆ ಪದವಿ ಪ್ರಮಾಣ ಪತ್ರ ರದ್ದುಗೊಳಿಸಿರುವ ಬಗ್ಗೆ ಆದೇಶ ಪತ್ರ ನೀಡಲಾಗಿದೆ.
ಉಚ್ಛ ನ್ಯಾಯಾಲಯದ ರಿಟ್ ಅರ್ಜಿ 55601/2018ರ ತೀರ್ಪಿನಂತೆ ಸರ್ಕಾರದ ಕಟ್ಟುನಿಟ್ಟಿನ ನಿರ್ದೇಶನದನ್ವಯ ಕೃಷಿ ಕೋಟಾದಡಿ ಬಿಎಸ್ಸಿ ಕೃಷಿ ಪದವಿಗೆ ಪ್ರವೇಶ ಪಡೆದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿ, ಪಡೆಯಲಾದ ಪದವಿ ಪ್ರಮಾಣ ಪತ್ರಗಳನ್ನು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
ಬಿಎಸ್ಸಿ ಕೃಷಿ ಪದವಿ, ತಾತ್ಕಾಲಿಕ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ ಅಲ್ಲದೇ ಮುಂದುವರೆದು ಬಿಎಸ್ಸಿ ಪದವಿ ಪ್ರಮಾಣ ಪತ್ರದ ಆಧಾರದ ಮೇಲೆ ಪೂರೈಸಲಾದ ಎಂಎಸ್‌ಸಿ ಕೃಷಿ ಪದವಿ ಹಾಗೂ ಎಂಎಸ್‌ಸಿ ಆಧಾರದ ಮೇಲೆ ಪೂರೈಸಿದ ಪಿಹೆಚ್‌ಡಿ ಪದವಿ ಪ್ರಮಾಣ ಪತ್ರ ಸೇರಿದಂತೆ ನಿರ್ದೇಶಿತ ಎಲ್ಲಾ ದಾಖಲೆಗಳನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ.
ಮೂಲ ದಾಖಲೆಗಳನ್ನು ತಕ್ಷಣವೇ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಅಲ್ಲದೇ, ಪದವಿ ಪೂರೈಕೆಗೆ ವಿಶ್ವವಿದ್ಯಾಲಯಕ್ಕೆ ವೆಚ್ಚವಾದ 10 ಲಕ್ಷ ಹಣ ಪಾವತಿಸುವಂತೆ ಸೂಚಿಸಲಾಗಿದೆ. 2018 ರಿಂದ ಟಿ.ಮಾರೆಪ್ಪ ಅವರು ಈ ಪ್ರಕರಣದಲ್ಲಿ ಸರ್ಕಾರ ಮತ್ತು ನ್ಯಾಯಾಲಯ ಮಟ್ಟದಲ್ಲಿ ನಡೆಸಿದ ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.

Share

Leave a Comment