ವಿಧಾನ ಪರಿಷತ್ 3 ಸ್ಥಾನಗಳಿಗೆ ಅ. 3 ಕ್ಕೆ ಚುನಾವಣೆ

ಬೆಂಗಳೂರು, ಸೆ. ೧೧- ವಿಧಾನಸಭೆಗೆ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಅಕ್ಟೋಬರ್ 3 ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಡಾ. ಜಿ. ಪರಮೇಶ್ವರ್, ಕೆ.ಎಸ್. ಈಶ್ವರಪ್ಪ ಹಾಗೂ ವಿ. ಸೋಮಣ್ಣ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮೂರು ಸ್ಥಾನಗಳು ತೆರವಾಗಿದ್ದವು.
ಕೆ.ಎಸ್. ಈಶ್ವರಪ್ಪನವರ ಸದಸ್ಯ ಅವಧಿ 2020 ಜೂನ್ 30ರವರೆಗೆ, ಡಾ. ಜಿ. ಪರಮೇಶ್ವರ್ ಸದಸ್ಯ ಅವಧಿ 2020 ಜೂ. 30 ರವರೆಗೆ ಹಾಗೂ ವಿ. ಸೋಮಣ್ಣನವರ ಅವಧಿ 2022 ಜೂನ್ 14 ರವರೆಗೆ ಇತ್ತು.
ಸೆ. 14 ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಕೆಗೆ ಸೆ. 22 ಕೊನೆಯ ದಿನವಾಗಿದೆ. ಸೆ. 24 ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆಯಲು ಸೆ. 26 ಅಂತಿಮ ದಿನವಾಗಿರುತ್ತದೆ. ಅಕ್ಟೋಬರ್ 3 ರಂದು ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಸೆ. 6ಕ್ಕೆ ಚುನಾವಣೆಯ ಸಂಪೂರ್ಣ ಚಟುವಟಿಕೆಗಳು ಮುಕ್ತಾಯಗೊಳ್ಳಲಿವೆ ಎಂದು ಆಯೋಗದ ಅಧೀನ ಕಾರ್ಯದರ್ಶಿ ಪವನ್ ದಿವಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment