ವಿಧಾನಸೌಧದತ್ತ ಅತೃಪ್ತ ಶಾಸಕರು

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಅತೃಪ್ತ ಶಾಸಕರು ಆಗಮಿಸುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ವಿಧಾನಸೌಧದಲ್ಲಿರುವ ಸ್ಪೀಕರ್‌ ಅವರ ಕೊಠಡಿಗೆ ತೆರಳಲಿದ್ದಾರೆ. ಸದ್ಯ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೊರಟ ಆರು ಮಂದಿ ಶಾಸಕರು ಫ್ರಿ ಸಿಗ್ನಲ್‌ನಲ್ಲಿ ವಿಧಾನಸೌಧದಲ್ಲಿ ಪೊಲೀಸರ ಬೆಂಗಾವಲು ವಾಹನದೊಂದಿಗೆ ತೆರಳುತ್ತಿದ್ದಾರೆ.

ಸುಪ್ರೀಂಕೋರ್ಟ್‌ ಏನು ಹೇಳಿತ್ತು?
ಕರ್ನಾಟಕದ ಅತೃಪ್ತ ಶಾಸಕರು ಕೊಟ್ಟಿರುವ ರಾಜೀನಾಮೆ ಕುರಿತು ಇಂದು ಸಂಜೆ 6 ಗಂಟೆಯೊಳಗೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಎದುರು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜತೆಗೆ ಸರ್ಕಾರ ಮತ್ತು ಸ್ಪೀಕರ್. ಕೆ.ಆರ್. ರಮೇಶ್ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಸ್ಪೀಕರ್ ಎದುರು ಹಾಜರಾಗಲು ಬೆಂಗಳೂರಿಗೆ ಬರುವ ಅತೃಪ್ತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸ್ ಡಿಜಿಪಿ ಅವರಿಗೂ ನ್ಯಾಯಪೀಠ ಸೂಚನೆ ನೀಡಿದೆ. ಸ್ಪೀಕರ್ ವಿರುದ್ಧ ಅತೃಪ್ತ ಶಾಸಕರು ಕೊಟ್ಟಿರುವ ದೂರುಗಳ ಕುರಿತು ನಾಳೆ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು.

Leave a Comment