ವಿಧಾನಸೌಧಕ್ಕೆ ಬನ್ನಿ, ನಿಮ್ಮ ಸಮಸ್ಯೆ ಚರ್ಚೆ ನಡೆಸೋಣ : ರೈತ ನಿಯೋಗಕ್ಕೆ ಸಿಎಂ ಕರೆ

ಬೆಂಗಳೂರು.ಅ.10. ಚಳಿಗಾಲದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದರಂತೆ, ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಪ್ರತಿಭಟನೆಗೆ ಇಳಿದಿದ್ದರು. ಇಂತಹ ಪ್ರತಿಭಟನಾ ನಿರತ ರೈತನ್ನು ಭೇಟಿಯಾಗಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತುಕತೆ ನಡೆಸಿದ್ದರು. ಆದರೇ ಮಾತಕತೆಗೆ ಸಫಲವಾಗಿರಲಿಲ್ಲ. ಇದೀಗ ಇಂತಹ ರೈತರನ್ನು ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

ಇಂದು ವಿಧಾನಮಂಡಲ ಕಲಾಪ ಆರಂಭಲಾಗಿದೆ. ಇಂತಹ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿಯೇ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ರೈತರು ಧರಣಿ, ಪ್ರತಿಭಟನೆ ನಡೆಸುತ್ತಿದ್ದರು. ಇಂತಹ ರೈತರನ್ನು ಮನವೊಲಿಸರು ಡಿಸಿಎಂ ಲಕ್ಷ್ಮಣ್ ಸವದಿ ಅವರು ಮಾತುಕತೆ ನಡೆಸಿ ಪ್ರತಿಭಟನೆ ಹಿಂಪಡೆಯುವ ಪ್ರಯತ್ನ ನಡೆಸಿದ್ದರು. ಆದರೇ ಈ ಮನವೊಲಿಕೆ ಮಾತುಕತೆಗೆ ಜಗ್ಗಲಿಲ್ಲ.

ಇದೀಗ ಇಂತಹ ಪ್ರತಿಭಟನ ನಿರತ ರೈತರಿಗೆ ವಿಧಾನಸೌಧಕ್ಕೆ ಬನ್ನಿ, ಮಾತುಕತೆ ಮೂಲಕ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದ್ದರು. ಹೀಗಾಗಿ ವಿಧಾನಸೌಧಕ್ಕೆ ತೆರಳಿರುವ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತರ ನಿಯೋಗ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆಗೆ ನೆರೆ ಪರಿಹಾರ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದಾರೆ. ಈ ಮೂಲಕ ಸಮಸ್ಯೆಗೆ ಸೂಕ್ತ ಸ್ಪಂದಿಸುವ ಕುರಿತಾಗಿ ಚರ್ಚೆ ನಡೆಸುತ್ತಿದ್ದಾರೆ.

Leave a Comment