ವಿಧಾನಪರಿಷತ್‍ಗೆ ಶಾಂತಿಯುತ ಉಪ ಚುನಾವಣೆ

ವಿಜಯಪುರ: ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ಇಂದು ವಿಧಾನ ಪರಿಷತ್ ಉಪ-ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 8 ಗಂಟೆಗೆ ಮತದಾನ ಶುರುವಾಗಿದ್ದು ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ್ ತಮ್ಮ ಬೆಂಬಲಿಗರ ಜೊತೆ ಜಿಲ್ಲಾ ಪಂಚಾಯತ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸಾಯಂಕಾಲ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, 16 ಅತಿಸೂಕ್ಷ್ಮ, 14 ಸೂಕ್ಷ್ಮ ಹಾಗೂ 8 ಸಾಧಾರಣ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವಳಿ ಜಿಲ್ಲೆಗಳಲ್ಲಿ ಒಟ್ಟು 8237 ಮತದಾರರಿದ್ದು, 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4074 ಪುರುಷ, 4163 ಮಹಿಳಾ ಮತದಾರರಿದ್ದಾರೆ.

ಶೇ.80 ರಷ್ಟು ಮತಗಳು ಕಾಂಗ್ರೆಸ್‍ಗೆ

ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಶೇ.80 ರಷ್ಟು ಮತಗಳು ಬರಲಿವೆ. ಉಪಚುನಾವಣೆಯಲ್ಲಿ ಗೆಲವು ನಿಶ್ಚಿತವೆಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುನಿಲಗೌಡ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಹೋದರ ಎಂ.ಬಿ.ಪಾಟೀಲ್ ಅವರು ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಜೆಡಿಎಸ್ ಬೆಂಬಲವೂ ಇರುವ ಕಾರಣ ನಮಗೆ ಸುಲಭ ಜಯ ಸಿಗುತ್ತದೆ. ಒಟ್ಟು 8,237 ಮತಗಳ ಪೈಕಿ 7000 ಕ್ಕೂ ಹೆಚ್ಚು ಮತಗಳು ಪಡೆಯುವೆ. ಬಿಜೆಪಿ ಬೆಂಬಲಿತ ಸದಸ್ಯರೂ ಸಹ ಕಾಂಗ್ರೆಸ್ ಪರ ಮತ ಚಲಾಯಿಲಿದ್ದಾರೆಂದು ಹೇಳಿದ್ದಾರೆ..

Leave a Comment