ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ

ರಾಯಚೂರು.ಜೂ.18- ಬಿಜನಗೇರಾ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ರೈತ ಕೃಷಿ ಕಾರ್ಮಿಕ ಸಂಘಟನೆ ಮತ್ತು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಮುಖಾಂತರ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂಬಂಧ ಬಿಜಿನಗೇರಾ ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ವಿದ್ಯುತ್ ಲೈನ್‌‌ನಲ್ಲಿ ಸಮಸ್ಯೆ ಉಂಟಾಗುತ್ತಿದೆ. ಇದರಿಂದ 2, 3 ದಿನಗಳಾದರೂ ಲೈನ್ ದುರಸ್ಥಿಗೊಳ್ಳದೇ ರೈತರು ತೊಂದರೆ ಅನುಭವಿಸಬೇಕಾಗಿದೆ. ಗ್ರಾಮಕ್ಕೆ ಒಬ್ಬ ಲೈನ್‌ಮ್ಯಾನ್ ಇಲ್ಲ. ಸಣ್ಣ ಪುಟ್ಟ ಕೆಲ ಸಮಸ್ಯೆಗಳಿಗೆ ಯಾರನ್ನು ಕೇಳಬೇಕು? ಎನ್ನುವಂತಾಗಿದೆ.
ಈ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸೂಕ್ತರೀತಿಯಲ್ಲಿ ಸ್ಪಂದಿಸುವುದಿಲ್ಲ. ಇದರಿಂದಾಗಿ ರೈತರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಕೊಳವೆಬಾವಿಯಲ್ಲಿರುವ ಅಲ್ಪ-ಸ್ವಲ್ಪ ನೀರನ್ನು ಬಳಸಿ ತರಕಾರಿ ಮತ್ತು ಇನ್ನಿತರ ಬೆಳೆ ಬೆಳಯಲು ರೈತರು ತೀವ್ರವಾದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬರಗಾಲದಲ್ಲಿ ವಿದ್ಯುತ್ ವ್ಯತ್ಯಯದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುವುದು ಗ್ರಾಮಸ್ಥರ ಅಳಲಾಗಿದೆ.
ಈ ಸಂದರ್ಭದಲ್ಲಿ ಆರ್‌ಕೆಎಸ್ ಜಿಲ್ಲಾ ಸಂಚಾಲಕರಾದ ರಾಮಣ್ಣ ಮರಕಂದಿನ್ನಿ, ಎಐಡಿವೈಓ ಜಿಲ್ಲಾ ಕಾರ್ಯದರ್ಶಿಗಳಾದ ಚನ್ನಬಸವ ಜಾನೇಕಲ್, ಹುಸೇನಪ್ಪ, ಮುರಳಿ, ಬಡೇಸಾಬ್, ಹನುಮಂತ, ವೀರೇಶ್, ರಮೇಶ್, ಕೃಷ್ಣಪ್ಪ, ಆಂಜಿನೇಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment