ವಿದ್ಯುತ್ ತಗುಲಿ ರೈತ ಸಾವು

ಲಕ್ಷ್ಮೇಶ್ವರ,ಆ16-ನೀರು ಎತ್ತುವ ಯಂತ್ರಕ್ಕೆ ವಿದ್ಯುತ್ ತಂತಿಯನ್ನು ಜೋಡಣೆ ಮಾಡುವಾಗ ವಿದ್ಯುತ ತಂತಿ ತಗಲಿ ರೈತರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಮೃತನನ್ನು ಸಲೀಂ ಮೊಹಮ್ಮದ ದೊಡ್ಡಮನಿ(26)ಎಂದು ಗುರುತಿಸಲಾಗಿದೆ.

 

 

 
ಘಟನೆಯ ವಿವರ: ಮೃತ ಪಟ್ಟ ರೈತನು ಮಂಜಲಾಪೂರ ಗ್ರಾಮದ ನಿವಾಸಿಯಾಗಿದ್ದು. ಇವರು ಎಂದಿನಂತೆ ತಮ್ಮ ಹೊಲಕ್ಕೆ ನೀರು ಹಾಯಿಸಲು ತಂದೆ ಮಗ ಇಬ್ಬರು ಬಂದಿದ್ದು. ಬೆಳೆಗಳಿಗೆ ನೀರು ಹಾಯಿಸಲು ಬಾವಿಯಿಂದ ನೀರು ಎತ್ತುವ ಯಂತ್ರಕ್ಕೆ ವಾಯರ್ ಜೋಡಣೆ ಮಾಡುವಾಗ ಆಕಸ್ಮಿಕವಾಗಿ ತಂತಿಯ ವಾಯರ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಂತರ್ ಪಿ.ಎಸ್.ಐ.ವಿಶ್ವನಾಥ ಚೌಗಲೆಯವರು ಸ್ಥಳಕ್ಕೆ ಬೇಟಿನೀಡಿ ಪರಿಶೀಲಿಸಿದರು.ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment