ವಿದ್ಯುತ್ ತಂತಿ ತಗುಲಿ ಎರಡು ಜಾನುವಾರುಗಳ ಸಾವು

ಮುಂಡಗೋಡ,ಸೆ 13- ತಾಲೂಕಿನ  ಬೆಡಸಗಾಂವ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಬೆಲೆಬಾಳುವ ಎರಡು ಜಾನುವಾರುಗಳು ಸಾವನ್ನಪ್ಪಿದ ಘಟನೆ ಜರುಗಿದೆ.
ಸಾವನ್ನಪ್ಪಿದ ಎರಡು ಜಾನುವಾರುಗಳು ಬೆಡಸಗಾಂವ ಗ್ರಾಮದ ನಿವಾಸಿ ಪರಮೇಶ್ವರ ಚೌಡಪ್ಪ ನಾಯ್ಕ ಎಂಬುವರಿಗೆ ಸೇರಿದ್ದಾಗಿದೆ.
ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮವಾಗಿ ವಿದ್ಯುತ್ ತಂತಿ ಸ್ಪರ್ಶದಿಂದ ಈ ಎರಡು ಜಾನುವಾರುಗಳು ಸಾವನ್ನಪ್ಪಿದೆ ಎನ್ನಲಾಗಿದೆ. ಈ ಘಟನೆಯಿಂದ ಸುಮಾರು 60 ಸಾವಿರರೂ ಹಾನಿಯಾಗಿದೆ. ಕಳೆದ ವರ್ಷ ಇದೇ ಪರಮೇಶ್ವರ ನಾಯ್ಕ ಅವರಿಗೆ ಸೇರಿದ ಜಾನುವಾರು ವಿದ್ಯುತ್ ತಂತಿ ಸ್ಪರ್ಶದಿಂದ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯತನದಿಂದ ಜಾನುವಾರುಗಳು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment