ವಿದ್ಯಾಸಾಗರರ ಪ್ರತಿಮೆ ಪುನರ್ ಪ್ರತಿಷ್ಠಾಪನೆ: ಮೋದಿ ಭರವಸೆ

ಮಾವು (ಉತ್ತರಪ್ರದೇಶ), ಮೇ ೬: ಕೋಲ್ಕತ್ತಾದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡೆಸಿದ ರೋಡ್ ಶೋ ವೇಳೆ “ತೃಣಮೂಲದ ಗೂಂಡಾಗಳು” ನಾಶಪಡಿಸಿದ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಅದೇ ಜಾಗದಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
‘ಕೋಲ್ಕತ್ತಾದಲ್ಲಿ ಅಮಿತ್ ಶಾ ರೋಡ್ ಶೋ ವೇಳೆ ವಿಜೃಂಭಿಸಿದ ತೃಣಮೂಲ ಕಾಂಗ್ರೆಸ್‌ನ ಗೂಂಡಾಗಿರಿಯನ್ನು ನಾವು ಕಂಡಿದ್ದೇವೆ. ಅವರು ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ವಿದ್ಯಾಸಾಗರರ ದೃಷ್ಟಿಕೋನ ಹಾಗೂ ಆದರ್ಶಗಳಿಗೆ ನಾವು ಬದ್ಧರಾಗಿದ್ದೇವೆ. ಅದೇ ಸ್ಥಳದಲ್ಲಿ ನಾವು ಅವರ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸುತ್ತೇವೆ’ ಎಂದು ಮೋದಿ ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಘೋಷಿಸಿದರು.
‘ಬಂಗಾಳದ ಸುಧಾರಕ’ ಎಂದೇ ಖ್ಯಾತರಾಗಿದ್ದ ಈಶ್ವರಚಂದ್ರ ವಿದ್ಯಾಸಾಗರರ ಹೆಸರನ್ನೇ ಹೊತ್ತಿದ್ದ ಕಾಲೇಜು ಆವರಣದಲ್ಲಿನ ಅವರ ಪ್ರತಿಮೆಯನ್ನು ಮಂಗಳವಾರ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಧ್ವಂಸಗೊಳಿಸಲಾಗಿದೆ. ಈ ದೃಷ್ಕೃತ್ಯಕ್ಕೆ ಬಿಜೆಪಿ ಹಾಗೂ ಟಿಎಂಸಿ ಪರಸ್ಪರ ದೋಷಾರೋಪಣೆ ಮಾಡಿಕೊಂಡಿವೆ.

Leave a Comment