ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ

 

ಕಲಬುರಗಿ,ಜೂ.30-ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಡಿಪ್ಲೋಮಾ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಜ್ ಹತ್ತಿರ ಸೋಮವಾರ ಸಾಯಂಕಾಲ ನಡೆದಿದೆ.

ಎಚ್.ಕೆ.ಇ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಸಿವಿಲ್ ಓದುತ್ತಿರುವ ಎಸ್.ಬಿ.ಕಾಲೇಜು ರಸ್ತೆಯ ರಾಮನಗರದ ಸಾಗರ ತಂದೆ ಮಹಾಂತೇಶ (20) ಹಲ್ಲೆಗೊಳಗಾದ ವಿದ್ಯಾರ್ಥಿ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವರ್ಷದ ಹಿಂದೆ ಫೈಹೀಮ್ ಮಿರ್ಜಾ ಎಂಬುವವರ ಅಳಿಯ ಮಿಜಾಮಿಲ್ ಎಂಬಾತನೊಂದಿಗೆ ಬೈಕ್ ವಿಷಯದಲ್ಲಿ ಸಣ್ಣ ಗಲಾಟೆ ಆಗಿತ್ತು. ಈ ವಿಷಯಕ್ಕೆ ಅವರು ಆಗಾಗ ಜಗಳ ತೆಗೆಯುತ್ತಿದ್ದರು. ಸೋಮವಾರ ಸಾಯಂಕಾಲ ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಜ್ ಹತ್ತಿರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.

ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Share

Leave a Comment