ವಿದ್ಯಾರ್ಥಿ ಬರ್ಬರ ಕೊಲೆ ಇಬ್ಬರ ಬಂಧನ

ಹೈದರಾಬಾದ್, ಮಾ.೧೪- ನಗರದ ಕುಕಟ್ಟಪಲ್ಲಿ ಪ್ರದೇಶದಲ್ಲಿ ಹತ್ಯೆಯಾಗಿದ್ದ 12 ತರಗತಿಯ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಮಹೇಶ್, ನವೀನ್ ಮತ್ತು ಶಿವ ಎಂದು ಗುರುತಿಸಲಾಗಿದ್ದು ಇನ್ನಿತರ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಮಾರ್ಚ್ 9 ರಂದು ಸುಧೀರ್ ಎಂಬ ವಿದ್ಯಾರ್ಥಿ ಕೊಲೆಯಾಗಿತ್ತು. ಸುಧೀರ್ ಪರೀಕ್ಷೆಗೆ ಹೋಗುವಾಗ ಆರೋಪಿಗಳು ಆತನನ್ನು ಬೆನ್ನಟ್ಟಿ ಹೋದಾಗ, ಆತ ಬೈಕ್ ಬಿಟ್ಟು ಬಸ್ ಏರಿದ್ದ, ಆದರೂ ಬಿಡದ ಆರೋಪಿಗಳು ಆತನನ್ನು ಬಸ್‌ನಿಂದ ಕೆಳಗೆ ಎಳೆದುಕೊಂಡು ಕೊಚ್ಚಿಹಾಕಿದ್ದರು. ಕೆಲ ದಿನಗಳ ಹಿಂದೆ ಸುಧೀರ್ ಹಾಗೂ ಆತನ ಸಹೋದರ ಒಂದು ಗುಂಪಿನೊಂದಿಗೆ ಜಗಳವಾಡಿಕೊಂಡಿದ್ದರು. ಆ ಘಟನೆ ಕೊಲೆಗೆ ಕಾರಣವಾಗಿತ್ತು.

ಮೂರು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Leave a Comment