ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ

ತುಮಕೂರು, ಫೆ. ೧೧- ಶ್ರೀ ರಾಮ್ ಫೌಂಡೇಷನ್ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭವನ್ನು ನಗರದ ಜಿಲ್ಲಾ ಭವನದಲ್ಲಿ ಇಂದು ಏರ್ಪಡಿಸಲಾಗಿದೆ.

ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್, 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್. ಭರತ್‍ಕುಮಾರ್, ನ್ಯಾ. ಗಣೇಶ್ .ಬಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿಯ ಸಿಇಓ ಸುದರ್ಶನ್ ಬಿ. ಹೊಳ್ಳ, ಅಧ್ಯಕ್ಷ ಶ್ರೀಧರ್ ಮಠಮ್ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜು, ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪೆನಿಯ ರೀಜನಲ್ ಬಿಸಿನೆಸ್ ಹೆಡ್ ಟಿ.ಆರ್. ರಾಘವೇಂದ್ರ ಭಾಗವಹಿಸುವರು ಎಂದು ರೀಜನಲ್ ಕಲೆಕ್ಷನ್ ಹೆಡ್ ಸಿ. ಹೇಮನಗೌಡ ಹಾಗೂ ಶಿವಕುಮಾರ್ .ಆರ್ ತಿಳಿಸಿದರು.

Leave a Comment