ವಿದ್ಯಾರ್ಥಿ ಜೀವನ ಸದುಪಯೋಗಕ್ಕೆ ಕರೆ

ಮಾನ್ವಿ.ಸೆ.09- ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡು ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ದೆಹಲಿಯ ಸೆಂಟ್ರಲ್ ವಿಜುಲೆನ್ಸ್ ಕಮಿಷ‌ನರ್ ಕೆ.ವಿ.ಚೌದರಿ ಹೇಳಿದರು.
ಅವರಿಂದು ಕಾಕತೀಯ ಎಜ್ಯುಕೇಷನ್ ಸೊಸೈಟಿನಲ್ಲಿ ಜನತಾರಾಣಿ ಟ್ರಸ್ಟ್ ಬೆಂಗಳೂರು ಮತ್ತು ತಾಲೂಕು ಕಮ್ಮವಾರಿ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂಬ ಛಲ ಹೊಂದಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಜನತಾರಾಣಿ ಟ್ರಸ್ಟ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಮುಂದಿನ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ವಿತರಿಸುತ್ತಿರುವುದು ಶ್ಲಾಘನೀಯ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೇರೇಪಿಸಬೇಕೆಂದು ತಿಳಿಸಿದರು.
ಗ್ರಾಮೀಣ ಪ್ರದೇಶದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಕೃಷಿಯನ್ನೇ ಅವಲಂಬಿತರಾಗಿದ್ದಾರೆ. ಅಂತಹವರನ್ನು ಗುರುತಿಸಿ, ಶಾಲಾ-ಕಾಲೇಜುಗಳಲ್ಲಿ ಪ್ರವೇಶಾತಿ ನೀಡಿ, ಶಿಕ್ಷಣ ನೀಡಲು ಮುಂದೆ ಬರುವಂತೆ ತಿಳಿಸಿದರು.
ಲಿಂಗಮ್ಮ ನೇನಿ ಬದ್ರಿ ನಾರಾಯಣ, ಜನತಾರಾಣಿ, ವೈ.ರಾಮಚಂದ್ರ ನಾಯ್ಡು, ಪತ್ತಿಪಾಟಿ ಆಂಜಿನೇಯಲು, ಶ್ರೀನಿವಾಸ ರಾವ್, ರಾಮಕೃಷ್ಣ, ಸುರೇಂದ್ರ ಬಾಬು, ರಾಜುಗೋಪಾಲ, ಡಾ.ಜಿ.ವಿ.ಪ್ರಸಾದ್, ಸುಭಾಷ್ ಚಂದ್ರಬೋಸ್, ವೆಂಕಟರಾವ್, ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment