ವಿದ್ಯಾರ್ಥಿ ಅಸ್ವಸ್ಥ.

ಮೈಸೂರು, ಜೂ. 19- ಮೈಸೂರಿನಲ್ಲಿ ನಡೆಯುತ್ತಿರುವ ವಿಶ್ವ ದಾಖಲೆಯ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಅಸ್ವಸ್ಥಗೊಂಡ ಪ್ರಸಂಗ ಇಂದು ಬೆಳಿಗ್ಗೆ ಸಂಭವಿಸಿದೆ.
ಇಂದು ಬೆಳಿಗ್ಗೆ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಯೋಗ ಪ್ರದರ್ಶನದಲ್ಲಿ ಶಕ್ತಿನಗರದ ಅದ್ಯಾನ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ನಿತೇಶ್ ಕುಮಾರ್ ಪಾಲ್ಗೊಂಡಿದ್ದನು. ಈ ಸಂದರ್ಭದಲ್ಲಿ ಆತ ದಿಢೀರ್ ಅಸ್ವಸ್ಥನಾದ ಪರಿಣಾಮ ಕೂಡಲೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು.
ವಿಶ್ವ ದಾಖಲೆ ನಿರ್ಮಿಸುವ ಸಲುವಾಗಿ ಮೈಸೂರು ಅರಮನೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ಪ್ರದರ್ಶನದಲ್ಲಿ ಇದುವರೆಗೂ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರೆಂದು ತಿಳಿದುಬಂದಿದೆ.
.

Leave a Comment