ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಶಿಕ್ಷಕನ ಬೆತ್ತಲೆ ಮೆರವಣಿಗೆ

ಹೈದರಾಬಾದ್,ಆ.೨೨- ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಗೈದ ಶಿಕ್ಷಕನಿಗೆ ಯುವತಿಯ ಪೋಷಕರು ಹಾಗೂ ಕುಟುಂಬಸ್ಥರು ನಡುರಸ್ತೆಯಲ್ಲೇ ಹಿಡಿದು ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಎಲೂರು ಪಟ್ಟಣದಲ್ಲಿ ನಡೆದಿದೆ.

ರಾಮಬಾಬು ಎಂಬ ೪೦ ವರ್ಷದ ಇಂಗ್ಲಿಷ್ ಶಿಕ್ಷಕ ಕಳೆದ ಎರಡು ವರ್ಷಗಳಿಂದ ತನ್ನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ. ೧೮ ವರ್ಷದ ವಿದ್ಯಾರ್ಥಿನಿ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದು, ಆರೋಪಿ ಆಕೆಗೆ ಗರ್ಭನಿರೋಧಕ ಮಾತ್ರೆಯನ್ನು ಕೊಡಿಸಿದ್ದ.

ನಂತರ ವಿದ್ಯಾರ್ಥಿನಿಗೆ ಅತಿಯಾದ ಖುತುಸ್ರಾವವಾದಾಗ ಪೋಷಕರಿಗೆ ಮಗಳ ಮೇಲೆ ಅತ್ಯಾಚಾರ ಹಾಗೂ ಗರ್ಭಪಾತವಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯಿಂದ ಸಿಟ್ಟಿಗೆದ್ದ ಪೋಷಕರು ಹಾಗೂ ವಿದ್ಯಾರ್ಥಿನಿಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಥಳಿಸಿ, ಕಿಕ್ಕಿರಿದ ರಸ್ತೆಯಲ್ಲೆ ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ನಂತರ ಪೊಲೀಸರು ರಾಮಬಾಬುನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

Leave a Comment