ವಿದ್ಯಾರ್ಥಿಗಳ ಮನಸ್ಸು ಗೆಲ್ಲುವಂತಹ ಶಿಕ್ಷಕರಾಗಬೇಕು: ಸಂಸದ ಸುರೇಶ್

ಕುಣಿಗಲ್, ಸೆ. ೭- ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತು ಅವರಿಗೆ ಅರ್ಥೈಸುವ ರೀತಿಯಲ್ಲಿ ಪಾಠದ ಜತೆಗೆ ನೀತಿ ಬೋಧನೆಯನ್ನು ಮನದಟ್ಟಾಗುವಂತೆ ಮಾಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವಂತಹ ಶಿಕ್ಷಕರಾಗಬೇಕು ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ದಿವ್ಯಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಕೃಷ್ಣನ್ ರವರ 131ನೇ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಣಬೆಯಂತೆ ಹೆಚ್ಚುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸರ್ಕಾರಿ ಶಾಲೆಗಳು ಉತ್ತಮ ರೀತಿಯಲ್ಲಿ ಸೇವಾ ಮನೋಭಾವದೊಂದಿಗೆ ಕೆಲಸ ಮಾಡಬೇಕು. ಪ್ರಯತ್ನಗಳನ್ನು ಮಾಡದೇ ಇರುವುದು ಇಂದು ಮುಗಿ ಬೀಳುತ್ತಿರುವುದಕ್ಕೆ ಕಾರಣ ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದರೊಂದಿಗೆ ಸರ್ಕಾರಿ ಶಾಲೆಯನ್ನು ಉತ್ತಮ ಶಾಲೆಯನ್ನಾಗಿ ಬಲಪಡಿಸಬೇಕು. ಸಮಾಜ ಪರಿವರ್ತನೆ ಶಿಕ್ಷಕರಿಂದ ಸಾಧ್ಯ. ಮುಂದಿನ ಪೀಳಿಗೆಯ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವವರು ನೀವು. ಮಕ್ಕಳಿಗೆ ಬದುಕಿನ ನಿರ್ವಹಣೆಯನ್ನು ಹೇಳಿಕೊಡಿ, ನವ ಸಮಾಜ ಕಟ್ಟಲು ಆ ಮಕ್ಕಳು ಶಿಕ್ಷಕರು ಮಾಡುವ ಪಾಠ ಹಾಗೂ ಅವರ ನಡೆ-ನುಡಿ ಹಾಗೂ ಬದುಕೆ ಮಕ್ಕಳಿಗೆ ಮಾರ್ಗದರ್ಶನವಾಗಬೇಕು. ಅಂತಹ ಸಾಲಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಸಾಗಿದರೆ ಮಾತ್ರ ಉತ್ತಮ ಶಾಲೆ, ಉತ್ತಮ ಸಮಾಜದ ಕನಸು ನನಸಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ರಂಗನಾಥ್ ಮಾತನಾಡಿ, ಮಕ್ಕಳಿಗೆ ಉತ್ತಮ ಪಾಠ ಹೇಳಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಉತ್ತಮ ವ್ಯಕ್ತಿಯಾಗಲು ಸಾಧ್ಯ. ಮನೆಗಳಲ್ಲಿ ತಂದೆ-ತಾಯಿಗಳ ಪಾತ್ರದಷ್ಟೆ ಶಾಲೆಯಲ್ಲಿ ಗುರುವಿನ ಪಾತ್ರವೂ ಪ್ರಮುಖವಾಗಿರುತ್ತದೆ. ನವಭಾರತ ಕಟ್ಟಲು ಅಡಿಪಾಯ ಹಾಕುವವರೆ ಶಿಕ್ಷಕರು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಹರೀಶ್‌ನಾಯ್ಕ್, ತಹಶೀಲ್ದಾರ್ ನಾಗರಾಜು,  ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ನಿವೃತ್ತರಾದ ಶಿಕ್ಷಕರನ್ನು ಗೌರವದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ನಳಿನಾ ಬೈರಪ್ಪ, ಉಪಾಧ್ಯಕ್ಷರಾದ ಅರುಣ್‌ಕುಮಾರ್, ಬಿಇಒ ಸಿದ್ದಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಮಮತಾಮಣಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಗೋಪಾಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ (ಗುರು), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಬಿ. ರವಿಕುಮಾರ್, ವಿದ್ಯಾ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜು, ಕಸಾಪ ಅಧ್ಯಕ್ಷ ಕ.ಚ. ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕ ಪ್ರೇಮ್‌ಕುಮಾರ್ ರಚಿಸಿರುವ ವಿರಹಿ ಎಂಬ ಕವಲ ಸಂಕಲ ಬಿಡುಗಡೆ ಮಾಡಲಾಯಿತು.

Leave a Comment