ವಿದ್ಯಾರ್ಥಿಗಳ ಪುನರ್ ಮಿಲನ

ಬೆಂಗಳೂರು, ಸೆ.೩- ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇದೇ ಸೆ.16 ರಂದು ವಿಲ್ಸನ್ ಗಾರ್ಡನ್ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ವಿಲ್ಸನ್ ಗಾರ್ಡನ್ ವಿದ್ಯಾ ಸಂಸ್ಥೆಯ, ಮಾರುತಿ ವಿದ್ಯಾಲಯ, ಹೊಂಬೇಗೌಡ ಬಾಲಕ, ಬಾಲಕಿಯರ ಪ್ರೌಢ ಶಾಲೆಯಲ್ಲಿ ಓದಿದ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಾಲೆಯ ಶ್ರೇಯೋಭಿವೃದ್ಧಿ ಬಗ್ಗೆ ಕಾರ್ಯಕ್ರಮ ರೂಪಿಸುವ ಸಲುವಾಗಿ ಹಾಗೂ ವಿದ್ಯೆಯ ಭದ್ರ ಬುನಾದಿ ಹಾಕಿದ ಶಾಲಾ ಶಿಕ್ಷಕರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಸಂಪರ್ಕಿಸುವಂತೆ ಹೊಂ ಬೆಳಕು ಸಂಘದ ಕಾರ್ಯದರ್ಶಿ ಜಾದುಗಾರ ಎಸ್.ಪಿ. ನಾಗೇಂದ್ರ ಪ್ರಸಾದ್ ಕೋರಿದ್ದಾರೆ. ಮೊ. 98450- 72042 ಗೆ ಸಂಪರ್ಕಿಸುವುದು.

Leave a Comment