ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯಕ

ಕೆ.ಆರ್.ಪೇಟೆ,ಜೂ.13- ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಕಲಿಕೆಯು ಅಗತ್ಯವಾಗಿದೆ. ಕಂಪ್ಯೂಟರ್ ಜ್ಞಾನ ಪಡೆದುಕೊಂಡವರು ಸುಲಭವಾಗಿ ಒಳ್ಳೆಯ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಹಾಗಾಗಿ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬೀರುವಳ್ಳಿ ಬಾಬು ರಾಜೇಂದ್ರಪ್ರಸಾದ್ ಸ್ಮಾರಕ ಅನುಧಾನಿತ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ವಿ ಹೇಮಂತ್‍ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅವರು ತಾಲೂಕಿನ ಬೀರುವಳ್ಳಿ ಶ್ರೀ ಬಾಬು ರಾಜೇಂದ್ರಪ್ರಸಾದ್ ಸ್ಮಾರಕ ಅನುಧಾನಿತ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯದ ವತಿಯಿಂದ ಸುಮಾರು 3ಲಕ್ಷ ರೂ ಮೌಲ್ಯದ ಕಂಪ್ಯೂಟರ್‍ಗಳು ಮತ್ತು ಲ್ಯಾಪ್‍ಟ್ಯಾಪ್‍ಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಶಾಲೆಯಾದರೂ ಸಹ ತಮಗೆ ಉತ್ತಮ ಶಿಕ್ಷಣ ನೀಡಿ ತಾವುಗಳು ಉನ್ನತ ಸ್ಥಾನಮಾನಕ್ಕೆ ಹೋಗಲು ಕಾರಣವಾದ ಶಾಲೆಯ ಪರಿಸರವನ್ನು ಹಾಗೂ ಶಿಕ್ಷಕ ವೃಂದವನ್ನು ಸ್ಮರಿಸಿದರು. ಈ ಶಾಲೆಯಲ್ಲಿ ಓದಿದವರು ತಹಸೀಲ್ದಾರ್, ಕೆ.ಎ.ಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ, ಇಂಜಿನಿಯರ್ಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಹಾಗಾಗಿ ಇದಕ್ಕೆ ಶಾಲೆಯ ಪರಿಸರ ಮತ್ತು ಶಿಕ್ಷಕ ವೃಂದವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ವಿದ್ಯಾರ್ಥಿಗಳ ಸಂಘದ ಹೇಮಂತ್‍ಕುಮಾರ್ ನಾವು ಓದುತ್ತಿದ್ದ ಅವಧಿಯಲ್ಲಿ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲು ಸೌಲಭ್ಯ ಇರಲಿಲ್ಲ.

ಇದ್ದಿದ್ದರೆ ಇನ್ನೂ ಹೆಚ್ಚಿನ ವಿದ್ಯಾರ್ಹತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕಂಪ್ಯೂಟರ್‍ಗಳನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ನೀಡಿದ್ದೇವೆ ಇದನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಕಲಿಕೆ ಅಗತ್ಯವಾಗಿರುವ ಕಾರಣ ನಮ್ಮ ಸಂಘದ ಸಣ್ಣ ಕಾಣಿಕೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ಈ ಮೂಲಕ ಶಾಲೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.

ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಎಂ.ವಿ.ಹೇಮಂತ್‍ಕುಮಾರ್, ಎಸ್.ಡಿ.ರವಿಕುಮಾರ್, ಬಿ.ಡಿ.ವೆಂಕಟೇಶ್, ಯೋಗೇಶ್, ರವಿ, ದಿಲೀಪ್, ಯತೀಶ್ ಮತ್ತಿತರರ ನೇತೃತ್ವದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಕಂಪ್ಯೂಟರ್‍ಗಳು ಮತ್ತು ಎರಡು ಲ್ಯಾಪ್‍ಟ್ಯಾಪ್‍ಗಳನ್ನು ತಮಗೆ ಪಾಠ ಕಲಿಸಿದ ನಿವೃತ್ತ ಶಿಕ್ಷಕರಾದ ರಂಗರಾಮಯ್ಯ, ವೈ.ಕೆ.ಶ್ರೀಕಂಠಮೂರ್ತಿ, ಕೆ.ಆರ್.ಶ್ರೀನಿವಾಸನ್, ಸಂಸ್ಥೆಯ ಅಧ್ಯಕ್ಷ ಬಿ.ಎಚ್.ತಿಮ್ಮೇಗೌಡ, ಮುಖ್ಯ ಶಿಕ್ಷಕ ನಿಂಗನಾಯಕ್ ಸಮ್ಮುಖದಲ್ಲಿ ಕಂಪ್ಯೂಟರ್‍ಗಳನ್ನು ಹಸ್ತಾಂತರ ಮಾಡಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಅಲ್ಲದೆ ಕಂಪ್ಯೂಟರ್ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗೌರವ ಧನ ನೀಡಿ ನೇಮಕ ಮಾಡಿಕೊಡುವ ಭರವಸೆಯನ್ನು ಸಹ ಹಿರಿಯ ವಿದ್ಯಾರ್ಥಿಗಳ ಸಂಘವು ನೀಡಿತು. ಸಂಸ್ಥೆಯ ಅಧ್ಯಕ್ಷ ಬಿ.ಎಚ್.ತಿಮ್ಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ನಿಂಗನಾಯಕ್, ತಾಲೂಕು ಪಂಚಾಯಿತಿ ಸದಸ್ಯ ನಿಂಗೇಗೌಡ, ಸಂಸ್ಥೆಯ ಕಾರ್ಯದರ್ಶಿ ರಮೇಶ್‍ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ಕುಮಾರ್, ಶಿಕ್ಷಕರಾದ ಕೆ.ಎನ್.ಅಣ್ಣಯ್ಯ, ಜಿ.ಸಿ.ಈಶ್ವರರೆಡ್ಡಿ, ರವೀಶ್, ಎಂ.ಆರ್.ನಾರಾಯಣಸ್ವಾಮಿ, ಎಸ್.ತಾರಾ, ಶಿವಕುಮಾರ್, ಪ್ರತಾಪ್, ಅನುಸೂಯ, ಎ.ಆರ್.ವೆಂಕಟೇಶ್, ಹಳೆಯ ವಿದ್ಯಾರ್ಥಿಗಳ ಸಂಘದ ಮಹಾದೇವ್, ಶಿವಶಂಕರ್, ರಂಗೇಗೌಡ, ಆನಂದ್, ಎನ್.ಪಿ.ರವಿ, ಸಂತೋಷ್, ವಿರೂಪಾಕ್ಷ, ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment