ವಿದ್ಯಾರ್ಥಿಗಳಿಗೆ ಇಷ್ಟ – ಕಷ್ಟದ ನಾಯಕರು

ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ದೊಂಬರಾಟವನ್ನು ಆರಂಭಿಸಿವೆ. ಮತದಾರ ಸಹ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಹೊಸದಾಗಿ ಮತ ಪಟ್ಟಿಗೆ ಸೇರಿರುವ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ತವಕಿಸುತ್ತಿದ್ದಾರೆ.

ಇದರ ನಡುವೆ, 2023ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆಯುವಂತ ಪ್ರೌಢಶಾಲಾ ಮತ್ತು ಪಿಯುಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು, ರಾಷ್ಟ್ರ ಮತ್ತು ರಾಜ್ಯ ರಾಜಕೀಯ, ಜ್ಞಾನ, ನೆಚ್ಚಿನ ನಾಯಕ ಯಾರೆಂಬುದನ್ನು ತಿಳಿಯಲು ಸಂಜೆವಾಣಿ ನಡೆಸಿದ ಪ್ರಯತ್ನವಿದು.

 1. ನಿಮ್ಮ ನೆಚ್ಚಿನ ರಾಷ್ಟ್ರ ನಾಯಕ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 2. ನಿಮ್ಮ ನೆಚ್ಚಿನ ರಾಜ್ಯ ರಾಜಕಾರಣಿ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 3. ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ? ಯಾರು ಮುಖ್ಯಮಂತ್ರಿ ಆಗಬಹುದು ?
 4. ನೀವು ಕಂಡಂತೆ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಏನು ?
 5. ನೀವು ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೀರಿ. ?
 6. ಕರ್ನಾಟಕದಲ್ಲಿ ಮಹಿಳಾ ಸಿಎಂ ಆಗಬೇಕೆಂದು ಬಯಸುತ್ತೀರಾ ? ಆದರೆ ಯಾರು ಆಗಬಹುದು ?
 7. ಸ್ವಚ್ಛ ಭಾರತ ಆಂದೋಲನದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
 8. ನೀವು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಯಾದರೆ ನಿಮ್ಮ ಕನಸಿನ ಭಾರತ ಅಥವಾ ಕರ್ನಾಟಕ ಯಾವ ಮಾದರಿಯಲ್ಲಿರುತ್ತದೆ ?

vishalವಿಶಾಲ್ .ಎಸ್,

9ನೇ ತರಗತಿ, ಭಾರತ ಸೇವಾದಲ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ಗಡಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ತಕ್ಕ ಉತ್ತರ ನೀಡುತ್ತಿದ್ದಾರೆ. ಮೊದಲು ಹೆದರಿಸುತ್ತಿದ್ದ ಚೀನಾ ಈಗ ಹೆದರಿಕೊಂಡು ಕುಳಿತಿದೆ.
 2. ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ವಿವಾದಗಳಿಲ್ಲ, ಎಂತಹವರನ್ನು ತನ್ನೊಂದಿಗೆ ಕರೆದುಕೊಂಡು ಹೋಗುವ ಶಕ್ತಿ ಅವರಿಗಿದೆ.
 3. ಕಾಂಗ್ರೆಸ್ ಗೆಲ್ಲಬಹುದು, ಮತ್ತೆ ಸಿದ್ದರಾಮಯ್ಯ ಸಿಎಂ ಆಗಬಹುದು.
 4. ಕೇರಳ, ಮಹಾರಾಷ್ಟ್ರದೊಂದಿಗೆ ಗಡಿ ವಿವಾದ ಇನ್ನು ಬಗೆಹರಿದಿಲ್ಲ. ಕಾವೇರಿ ಮಹದಾಯಿ ಸಮಸ್ಯೆಗಳಂತೂ ತಲೆನೋವಾಗಿದೆ.
 5. ಟಿಪ್ಪು, ಭಗತ್‌ಸಿಂಗ್, ಸುಭಾಶ್‌ಚಂದ್ರ ಬೋಸ್ ಅವರ ಜಯಂತಿಗಳನ್ನು ಮಾಡಬೇಕು. ಅದರಿಂದ ರಾಷ್ಟ್ರಪ್ರೇಮ ಹೆಚ್ಚುತ್ತದೆ.
 6. ಶೋಭಾಕರಂದ್ಲಾಜೆ ಸಿಎಂ ಆಗಬೇಕೆಂದು ಬಯಸುತ್ತೇವೆ.
 7. ಸ್ವಚ್ಛ ಭಾರತ ಆಂದೋಲನದಿಂದಾಗಿ ದೇಶದಲ್ಲಿ ಸ್ವಚ್ಛತೆಯ ಜಾಗೃತಿ ಆಗಿದೆ.
 8. ನಾನು ಪ್ರಧಾನಿಯಾದರೆ ಭ್ರಷ್ಟಾಚಾರ ಮುಕ್ತ, ಅತ್ಯಾಚಾರ ಮುಕ್ತ, ರಾಷ್ಟ್ರವನ್ನಾಗಿ ಮಾಡುತ್ತೇನೆ.

manu-pಮನು.ಪಿ

9ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ಪತ್ತೆ, ಜಿಎಸ್‌ಟಿ ಜಾರಿಯಾದ ತೆರಿಗೆ ಕಳ್ಳತನ ತಪ್ಪಿಸಿದ್ದಾರೆ.
 2. ಸಿದ್ದರಾಮಯ್ಯ, ಕೃಷಿಭಾಗ್ಯ, ಅನ್ನಭಾಗ್ಯ ಸೇರಿದಂತೆ ಜನಪರ ಯೋಜನೆಗಳನ್ನು ನೀಡಿದ್ದಾರೆ.
 3. ಬಿಜೆಪಿ ಅಧಿಕಾರಕ್ಕೆ ಬರಬಹುದು. ಯಡಿಯೂರಪ್ಪ ಸಿಎಂ ಆಗಬಹುದು.
 4. ಕೃಷಿ ನೀರಾವರಿಗೆ ಹೊಸ ಯೋಜನೆಗಳಿಲ್ಲ, ಹಿಂದಿನವರು ಕಟ್ಟಿದ ಅಣೆಕಟ್ಟೆಗಳನ್ನು ಬಿಟ್ಟರೆ ಹೊಸದೇನೂ ಇಲ್ಲ.
 5. ಭಗತ್‌ಸಿಂಗ್ ಜಯಂತಿ ಆಚರಿಸಬೇಕು.
 6. ಶೋಭಾಕರಂದ್ಲಾಜೆ ಮುಖ್ಯಮಂತ್ರಿ ಆಗಬೇಕು.
 7. ಉತ್ತಮ ಕಾರ್ಯಕ್ರಮ. ವಿದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ಗಲೀಜು ರಾಷ್ಟ್ರ. ಅದರ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು.
 8. ನಾನು ಪ್ರಧಾನ ಮಂತ್ರಿ ಆದರೆ, ಶಿಕ್ಷಣದಲ್ಲಿ ಹಿಂದಿನಂತೆ ನೀತಿ ಪಾಠಗಳನ್ನು ಅಳವಡಿಸುತ್ತೇನೆ. ಅದರಿಂದ ಅಪರಾಧಗಳ ಬಗ್ಗೆ ಅರಿವು ಮೂಡುತ್ತದೆ.

prajwalಪ್ರಜ್ವಲ್ ಎಚ್.ಆರ್.

ಪ್ರಥಮ ಪಿಯುಸಿ, ವಿದ್ಯಾಸೌಧ ಪಿಯು ಕಾಲೇಜು, ಪೀಣ್ಯ, ಬೆಂಗಳೂರು.

 1. ನರೇಂದ್ರ ಮೋದಿ, ಸೊಗಸು ಮತ್ತು ಆಕರ್ಷಕ ವ್ಯಕ್ತಿ. ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮಾತಿನ ಮೋದಿ ಆಗದೆ, ಕಾಯಕದ ಮೋದಿ ಆದಲ್ಲಿ,
  ಇನ್ನೂ ಒಳ್ಳೆಯದು.
 2. ಬಿ.ಎಸ್. ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಉತ್ತಮ ನಾಯಕರು. ಕೊಂಚ ಜಾತಿ ರಾಜಕಾರಣ ಬಿಟ್ಟರೆ ಅತ್ಯುತ್ತಮರು
 3. ಅತಂತ್ರ ಸರ್ಕಾರ ಉದ್ಭವಿಸಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೆ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಆಗಬಹುದು. ಯುವಕ ಕೃಷ್ಣ ಭೈರೇ ಗೌಡ ಅಂತವರಿಗೆ ಅವಕಾಶ ದೊರೆಯಬೇಕು.
 4. ಗ್ರಾಮೀಣ ಪ್ರದೇಶದ ಜನತೆಯ ಬದುಕು ದುಸ್ತರವಾಗುತ್ತಿದ್ದು, ಕೃಷಿಕರಿಗೆ ಅನುಕೂಲವಾಗುವಂತಹ ಕೆಲಸವಾಗಬೇಕು. ವರದಕ್ಷಿಣೆ ಪಿಡುಗು, ಭ್ರಷ್ಟಾಚಾರ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಲೇ ಇವೆ.
 5. ಸ್ವಚ್ಛ ರಾಜ್ಯವಾಗಬೇಕು. ಭ್ರಷ್ಟಾಚಾರವನ್ನು ಸ್ವಚ್ಛಗೊಳಿಸಬೇಕು.
 6. ಮಹಿಳೆಯರಿಗೂ ಅವಕಾಶ ಸಿಗಬೇಕು. ಸಿಎಂ ಆಗುವಂತಹ ಧೀಮಂತ ಮಹಿಳಾ ನಾಯಕಿಯರು ಸದ್ಯಕ್ಕಂತೂ ಯಾರೂ ಇಲ್ಲ.
 7. ಸ್ವಚ್ಛ ಭಾರತ ಆಂದೋಲನಕ್ಕೆ ಸಿಕ್ಕಷ್ಟು ಪ್ರಚಾರದಷ್ಟು ಕಾರ್ಯಗತವಾಗಿಲ್ಲ. ಇದರಲ್ಲೂ ಭ್ರಷ್ಟಾಚಾರದ ಮಾತು ಕೇಳಿ ಬರುತ್ತಿದೆ.
 8. ನಾನು ಪ್ರಧಾನ ಮಂತ್ರಿಯಾದರೆ ದೇಶದಲ್ಲಿ ಮೊದಲಿಗೆ ಸುಶಿಕ್ಷಿತ ವ್ಯಕ್ತಿಗಳಿಗೆ ರಾಜಕೀಯ ಪ್ರವೇಶಿಸಲು ಅವಕಾಶ ಮತ್ತು ಮತದಾರನಿಗೆ ಆಮಿಷ ನೀಡುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸುತ್ತೇನೆ.
 • ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ
 • ಭಾವಚಿತ್ರದೊಂದಿಗೆ ಕಳುಹಿಸಿದರೆ ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸಲಾಗುವುದು.
 • ಶಾಲೆಯ ಹೆಸರು ಮತ್ತು ವಿಳಾಸ ಕಡ್ಡಾಯ
 • ವಿವರಗಳಿಗಾಗಿ ಸಂಪರ್ಕಿಸಿ : 9449871871

Leave a Comment