ವಿದ್ಯಾರ್ಥಿಗಳಿಗೆ ಇಷ್ಟ – ಕಷ್ಟದ ನಾಯಕರು

ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ದೊಂಬರಾಟವನ್ನು ಆರಂಭಿಸಿವೆ. ಮತದಾರ ಸಹ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಹೊಸದಾಗಿ ಮತ ಪಟ್ಟಿಗೆ ಸೇರಿರುವ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ತವಕಿಸುತ್ತಿದ್ದಾರೆ.

ಇದರ ನಡುವೆ, 2023ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆಯುವಂತ ಪ್ರೌಢಶಾಲಾ ಮತ್ತು ಪಿಯುಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು, ರಾಷ್ಟ್ರ ಮತ್ತು ರಾಜ್ಯ ರಾಜಕೀಯ, ಜ್ಞಾನ, ನೆಚ್ಚಿನ ನಾಯಕ ಯಾರೆಂಬುದನ್ನು ತಿಳಿಯಲು ಸಂಜೆವಾಣಿ ನಡೆಸಿದ ಪ್ರಯತ್ನವಿದು.

 1. ನಿಮ್ಮ ನೆಚ್ಚಿನ ರಾಷ್ಟ್ರ ನಾಯಕ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 2. ನಿಮ್ಮ ನೆಚ್ಚಿನ ರಾಜ್ಯ ರಾಜಕಾರಣಿ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 3. ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ? ಯಾರು ಮುಖ್ಯಮಂತ್ರಿ ಆಗಬಹುದು ?
 4. ನೀವು ಕಂಡಂತೆ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಏನು ?
 5. ನೀವು ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೀರಿ. ?
 6. ಕರ್ನಾಟಕದಲ್ಲಿ ಮಹಿಳಾ ಸಿಎಂ ಆಗಬೇಕೆಂದು ಬಯಸುತ್ತೀರಾ ? ಆದರೆ ಯಾರು ಆಗಬಹುದು ?
 7. ಸ್ವಚ್ಛ ಭಾರತ ಆಂದೋಲನದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
 8. ನೀವು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಯಾದರೆ ನಿಮ್ಮ ಕನಸಿನ ಭಾರತ ಅಥವಾ ಕರ್ನಾಟಕ ಯಾವ ಮಾದರಿಯಲ್ಲಿರುತ್ತದೆ ?

26ph1ವಿಕಾಸ್

10ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ನಿರ್ಮೂಲನೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದಲ್ಲೆಡೆ ಒಂದೇ ರೀತಿಯ ಜಿಎಸ್‌ಟಿ ತಂದಿದ್ದಾರೆ.
 2. ದಿನೇಶ್ ಗುಂಡೂರಾವ್, ಕೊಳೆಗೇರಿ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುತ್ತಾರೆ. ಕುಡಿಯುವ ನೀರಿಗಾಗಿ ಹಲವು ಬೋರ್ ವೆಲ್ ಕೊರೆಸಿದ್ದಾರೆ. ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದಾರೆ.
 3. ಜೆಡಿಎಸ್ ಅಧಿಕಾರಕ್ಕೆ ಬರಬಹುದು. ಕುಮಾರಸ್ವಾಮಿ ಅವರು ಸಿಎಂ ಆಗಬಹುದು.
 4. ಪರಿಸರ ಮಾಲಿನ್ಯ, ಕಾವೇರಿ ನದಿವಿವಾದ, ರಾಜಕೀಯ ಸಮಸ್ಯೆ ರೈತರ ಆತ್ಮಹತ್ಯೆ.
 5. ಜಲ ವಿವಾದಗಳನ್ನು ಬಗೆಹರಿಸಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆ, ಕೃಷಿಗೆ ಪ್ರಾಧಾನ್ಯತೆ, ಉತ್ತಮ ರಸ್ತೆಗಳು.
 6. ಇಂದಿರಾ ಗಾಂಧಿಯವಂತಹ ಒಬ್ಬ ದಿಟ್ಟ ಮಹಿಳೆ ಮುಖ್ಯಮಂತ್ರಿ ಬೇಕು.
 7. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಸ್ವಚ್ಛ ಭಾರತ್ ದೇಶದಲ್ಲಿ ಸಾಕಷ್ಟ ಜಾರಿಗೆ ಬಂದಿದೆ. ಪ್ರತಿಯೊಬ್ಬರಿಗೂ ಇದು ಗೊತ್ತಿದೆ.
 8. ನಾನು ಪ್ರಧಾನಿಯಾದರೆ, ಕೃಷಿ ಹಾಗೂ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತೇನೆ. ಪರಿಸರ ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇನೆ. ದಲಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಯಸುತ್ತೇನೆ. ಉದ್ಯೋಗ ಯೋಜನೆ ಜಾರಿಗೆ ತರಬೇಕು.

26ph5ಕರ್ಪಗ ಪಿ

9ನೇ ತರಗತಿ , ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ಅವರೆಂದರೆ ಇಷ್ಟ. ಅವರು ನೇರವಾಗಿ ತೆಗೆದುಕೊಳ್ಳುವ ನಿರ್ಧಾರ ಒಬ್ಬ ಉತ್ತಮ ರಾಜಕಾರಣಿಯನ್ನು ಪ್ರದರ್ಶಿಸುತ್ತದೆ.
 2. ಸಿದ್ದರಾಮಯ್ಯ, ಅನ್ನಭಾಗ್ಯ, ಸೋಲರ್ ಪಾರ್ಕ್‌ನಂತಹ ಜನಪರ ಕೆಲಸಗಳನ್ನು ಮಾಡಿದ್ದಾರೆ.
 3. ಜೆಡಿಎಸ್ ಗೆಲ್ಲುತ್ತದೆ ಪಕ್ಷ ನಿರ್ಧರಿಸಿದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ.
 4. ಎತ್ತಿನ ಹೊಳೆ ಯೋಜನೆ ಕುಂಠಿತ, ರೈತರ ಬೆಳೆಗಳಿಗೆ ಅಸಮರ್ಪಕ ಬೆಲೆ ನೀರಾವರಿ ವಿವಾದಗಳು .
 5. ಮೆಟ್ರೋರೈಲು ದರ ದುಬಾರಿ,  ಮೆಟ್ರೋರೈಲು ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಬೆಂಗಳೂರಿನಲ್ಲಿ ಹೆಚ್ಚುತಿರುವ ಜನ ಸಂಖ್ಯೆ.
 6. ಮಹಿಳಾ ಸಿಎಂ ಆಗಬೇಕು, ಶೋಭಾಕರಂದ್ಲಾಜೆ ಸಿಎಂ ಆಗಬೇಕು.
 7. ಪ್ರದೇಶ ಸ್ವಚ್ಛ ಮಾಡಿದಂತೆ ಕೆಟ್ಟ ಮನಸ್ಸುಗಳನ್ನು ಸ್ವಚ್ಛಮಾಡುವ ಯೋಜನೆ ಬರಬೇಕು.
 8. ನಾನು ಪ್ರಧಾನ ಮಂತ್ರಿಯಾದರೆ ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ, ಭ್ರಷ್ಟ ಅಧಿಕಾರಿಗಳನ್ನು ಖಾಯಂ ಆಗಿ ಕೆಲಸದಿಂದ ವಜಾ ಮಾಡುತ್ತೇನೆ.

27s2ಲೋಕೇಶ್ ಎಂ,

9ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ ಬೆಂಗಳೂರು.

 1. ನನ್ನ ನೆಚ್ಚಿನ ರಾಷ್ಟ್ರ ನಾಯಕ ಮತ್ತು ಪ್ರಧಾನಿ ಮಂತ್ರಿ ನರೇದ್ರ ಮೋದಿ ಬಡತನದಿಂದ ಈ ಹುದ್ದೆಗೆ ಏರಿರುವ ಅವರ ಕಠಿಣ ಶ್ರಮ ನನಗೆ ಬಹಳ ಇಷ್ಟ.
 2. ಎಚ್.ಡಿ.ದೇವೆಗೌಡ ಇವರು ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ರೈತರ ಪರವಾಗಿ ನಿಂತ ರಾಜಕಾರಣಿ.
 3. ಜೆಡಿಎಸ್ ಅಧಿಕಾರಕ್ಕೆ ಬರಬಹುದು, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಹುದು.
 4. ಪ್ರತಿಭಟನಾ ಮೆರವಣಿಗೆ, ಬಂದ್‌ಗಳಿಂದಾಗಿ ಬೆಂಗಳೂರಿನ ಜನರಿಗೆ ತುಂಬಾ ತೊಂದರೆಯಾಗುತ್ತಿದೆ.
 5. ಡಾ. ರಾಜ್‌ಕುಮಾರ್ ಜಯಂತಿಯನ್ನು ಕಲಾವಿದರ ಜಯಂತಿ ಎಂದು ಆಚರಿಸಬೇಕೆಂದು ನಿರೀಕ್ಷಿಸುತ್ತೇವೆ.
 6. ಮಹಿಳೆ ಸಿಎಂ ಆಗಬೇಕು. ಹಾಗೇನಾದರೂ ಆದರೆ ಮಾಲಾಶ್ರೀ ಸಿಎಂ ಆಗಬೇಕು.
 7. ಈ ಆಂದೋಲನದ ಪರಿಣಾಮವಾಗಿ ಭಾರತದಲ್ಲಿ ಹಿಂದಿಗಿಂತ ಈಗ ಸ್ವಲ್ಪ ಮಟ್ಟಿಗೆ ಸ್ವಚ್ಛತೆ ಕಾಣಬಹುದು.
 8. ನಾನು ಪ್ರಧಾನಿಯಾದರೆ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಉಚಿತ ಶಿಕ್ಷಣ ದೊರಕುವಂತೆ ಮಾಡಬೇಕು ಎಂಬ ಆಸೆ ಇದೆ.
 • ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ
 • ಭಾವಚಿತ್ರದೊಂದಿಗೆ ಕಳುಹಿಸಿದರೆ ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸಲಾಗುವುದು.
 • ಶಾಲೆಯ ಹೆಸರು ಮತ್ತು ವಿಳಾಸ ಕಡ್ಡಾಯ
 • ವಿವರಗಳಿಗಾಗಿ ಸಂಪರ್ಕಿಸಿ : 9449871871

Leave a Comment