ವಿದ್ಯಾರ್ಥಿಗಳಿಗೆ ಇಷ್ಟ – ಕಷ್ಟದ ನಾಯಕರು

ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ದೊಂಬರಾಟವನ್ನು ಆರಂಭಿಸಿವೆ. ಮತದಾರ ಸಹ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಹೊಸದಾಗಿ ಮತ ಪಟ್ಟಿಗೆ ಸೇರಿರುವ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ತವಕಿಸುತ್ತಿದ್ದಾರೆ.

ಇದರ ನಡುವೆ, 2023ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಅವಕಾಶ ಪಡೆಯುವಂತ ಪ್ರೌಢಶಾಲಾ ಮತ್ತು ಪಿಯುಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು, ರಾಷ್ಟ್ರ ಮತ್ತು ರಾಜ್ಯ ರಾಜಕೀಯ, ಜ್ಞಾನ, ನೆಚ್ಚಿನ ನಾಯಕ ಯಾರೆಂಬುದನ್ನು ತಿಳಿಯಲು ಸಂಜೆವಾಣಿ ನಡೆಸಿದ ಪ್ರಯತ್ನವಿದು.

 1. ನಿಮ್ಮ ನೆಚ್ಚಿನ ರಾಷ್ಟ್ರ ನಾಯಕ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 2. ನಿಮ್ಮ ನೆಚ್ಚಿನ ರಾಜ್ಯ ರಾಜಕಾರಣಿ ಯಾರು ? ಯಾವ ಕಾರಣಕ್ಕಾಗಿ ಸಂಕ್ಷಿಪ್ತವಾಗಿ ವಿವರಿಸಿ
 3. ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ? ಯಾರು ಮುಖ್ಯಮಂತ್ರಿ ಆಗಬಹುದು ?
 4. ನೀವು ಕಂಡಂತೆ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಏನು ?
 5. ನೀವು ರಾಜ್ಯದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೀರಿ. ?
 6. ಕರ್ನಾಟಕದಲ್ಲಿ ಮಹಿಳಾ ಸಿಎಂ ಆಗಬೇಕೆಂದು ಬಯಸುತ್ತೀರಾ ? ಆದರೆ ಯಾರು ಆಗಬಹುದು ?
 7. ಸ್ವಚ್ಛ ಭಾರತ ಆಂದೋಲನದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
 8. ನೀವು ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಯಾದರೆ ನಿಮ್ಮ ಕನಸಿನ ಭಾರತ ಅಥವಾ ಕರ್ನಾಟಕ ಯಾವ ಮಾದರಿಯಲ್ಲಿರುತ್ತದೆ ?

tejagsಜಿ.ಎಸ್. ತೇಜ,

10ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ಭಾರತದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಜಿಎಸ್‌ಟಿಯಿಂದ ತೆರಿಗೆ ವಂಚನೆಯನ್ನು ತಪ್ಪಿಸಿದ್ದಾರೆ. ಕಪ್ಪುಹಣವನ್ನು ಹೊರತೆಗೆಯಲು ನೋಟು ಬ್ಯಾನ್ ಮಾಡಿದ್ದಾರೆ.
 2. ಬಿ.ಎಸ್. ಯಡಿಯೂರಪ್ಪ, ಶಾಲಾ ಮಕ್ಕಳಿಗೆ ಉಚಿತ ಸೈಕಲ್ ಯೋಜನೆ, ಸೇರಿದಂತೆ, ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.
 3. ಜೆಡಿಎಸ್ ಅಧಿಕಾರಕ್ಕೆ ಬರಬಹುದು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಹುದು.
 4. ಕಾವೇರಿ, ಮಹದಾಯಿ ನದಿ ಸಮಸ್ಯೆ, ರೈತರ ಸಮಸ್ಯೆಗಳು, ಸ್ವಚ್ಛತೆ ಸಮಸ್ಯೆ.
 5. ಎಲ್ಲರಿಗೂ ಶಿಕ್ಷಣ ಸಿಗಬೇಕು. ಬಡತನ ಹೋಗಬೇಕು. ಮಹಿಳೆಯರಿಗೆ ರಕ್ಷಣೆ.
 6. ಮಹಿಳಾ ಸಿಎಂ ಆಗಬೇಕು. ಇದುವರೆಗೆ ಯಾರೂ ಆಗಿಲ್ಲ. ಆದರೆ ಉಮಾಶ್ರೀ ಮುಖ್ಯಮಂತ್ರಿ ಅಗಬಹುದು.
 7. ಸ್ವಚ್ಛ ಭಾರತ್ ಆಂದೋಲನದಿಂದ ನಮ್ಮ ಭಾರತ ಸ್ವಚ್ಛ.
 8. ನಾನು ಪ್ರಧಾನ ಮಂತ್ತಿ ಆದರೆ ವಿಶ್ವದಲ್ಲಿ ಭಾರತ ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸುತ್ತೇನೆ. ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ.

lalathkumarಲಲಿತ್ ಕುಮಾರ್

9ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು

 1. ನರೇಂದ್ರಮೋದಿ, ಇವರು ನೋಟುಗಳನ್ನು ಬದಲಾವಣೆ ಮಾಡಿದ್ದರಿಂದ ಕೋಟ್ಯಂತರ ರೂಪಾಯಿ ಕಪ್ಪು ಹಣ ಬೆಳಕಿಗೆ ಬಂತು.
 2. ಎಚ್.ಡಿ. ದೇವೇಗೌಡರು, ಇವರು ಇಲ್ಲದಿದ್ದ ರಾಜ್ಯ ರಾಜಕಾರಣವನ್ನು ನೆನೆಸಿಕೊಳ್ಳುವುದೇ ಕಷ್ಟ. ವಯಸ್ಸಾದರೂ ರಾಜ್ಯದ ಸಮಸ್ಯೆಗಳು ಬಂದರೆ ಹೋರಾಟ ಮಾಡುತ್ತಾರೆ.
 3. ಬಿಜೆಪಿ ಬರಬಹುದು, ಯಡಿಯೂರಪ್ಪ ಸಿಎಂ ಆಗಬಹುದು.
 4. ಮರಳು ದಂಧೆ, ಗಣಿಗಾರಿಕೆ, ಪರಿಸರ ನಾಶ.
 5. ನಿಜವಾದ ಬಡವರಿಗೆ ಸಹಾಯ ಸಿಗಬೇಕು. ಬಡವರ ಹೆಸರಲ್ಲಿ ತಿಂದು ತೇಗುವವರನ್ನು ಬಲಿ ಹಾಕಬೇಕು.
 6. ಮಹಿಳೆಯರಿಗೂ ಒಂದು ಛಾನ್ಸ್ ಕೊಡೋಣ, ಶೋಭಾಕರಂದ್ಲಾಜೆ ಸಿಎಂ ಆಗಬೇಕು.
 7. ಸ್ವಚ್ಛ ಭಾರತ ಅಭಿಯಾನ ಉತ್ತಮ ಕಾರ್ಯಕ್ರಮ, ದಂಡಂ ದಶಗುಣಂ ಎಂಬಂತೆ ದಂಡದ ಮೂಲಕ ಪರಿಸರ ಹಾಳು ಮಾಡುವವರನ್ನು ತಡೆಗಟ್ಟಬೇಕು.
 8. ನಾನು ಪ್ರಧಾನ ಮಂತ್ರಿ ಆದರೆ, ಅಮೆರಿಕಾದಲ್ಲಿರುವಂತೆ ನಾಗರಿಕರಿಗೆ ಗ್ರೀನ್ ಕಾರ್ಡ್ ಕೊಟ್ಟು ಅದರ ಮೂಲಕವೇ ಎಲ್ಲಾ ವ್ಯವಹಾರಗಳನ್ನು ಮಾಡುವಂತೆ ಮಾಡುತ್ತೇನೆ.

sumanamnಎಂ.ಎನ್. ಸುಮನ

9ನೇ ತರಗತಿ, ಭಾರತ ಸೇವಾದಲ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ಅವರ ಕಾರ್ಯಕ್ರಮಗಳು ಹಾಗೂ ಜಾರಿಗೆ ತಂದ ವಿಧಾನ ಇಷ್ಟವಾಗಿದೆ. ಇನ್ನೂ ಹೆಚ್ಚು ಕೆಲಸಗಳನ್ನು ನಿರೀಕ್ಷಿಸುತ್ತೇನೆ.
 2. ಬಿ.ಎಸ್. ಯಡಿಯೂರಪ್ಪ, ಪ್ರತಿ ಬಡ ಕುಟುಂಬಕ್ಕೂ ಒಂದು ಸಾವಿರ ರೂಪಾಯಿ ಸಹಾಯಧನ ನೀಡುವ ಮೂಲಕ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ.
 3.  ಕಾಂಗ್ರೆಸ್ ಬರಬಹುದು, ಸಿದ್ದರಾಮಯ್ಯ ಸಿಎಂ ಆಗಬಹುದು.
 4. ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ, ಕೆರೆಗಳ ಒತ್ತುವರಿ, ಇದರಿಂದ ಭಾರೀ ಸಮಸ್ಯೆಗಳಾಗಿವೆ.
 5. ನಮ್ಮ ರಾಜ್ಯ ಸ್ವಚ್ಛ ಕರ್ನಾಟಕವಾಗಬೇಕು, ರಾಜ್ಯದ ಜನಸಂಖ್ಯೆ ಹೆಚ್ಚಬೇಕು.
 6. ಆಗಬೇಕು, ಉಮಾಶ್ರೀ ಮುಖ್ಯಮಂತ್ರಿ ಆಗಬೇಕು.
 7. ಸ್ವಚ್ಛ ಭಾರತ ಅಭಿಯಾನ ಶುರುವಾದ ಮೇಲೆ ರಾಜ್ಯದಲ್ಲಿ ಸ್ವಲ್ಪ ಸ್ವಚ್ಛತೆ ಕಾಣುತ್ತಿದೆ.
 8. ನಾನು ಪ್ರಧಾನಿಯಾದರೇ ಚೀನಾದಲ್ಲಿರುವಂತೆ ಸಮಾನ ಆಸ್ತಿ, ಸಮಾನ ಆದಾಯ ಕಾನೂನು ಜಾರಿಗೆ ತರುತ್ತೇನೆ.

swathirಸ್ವಾತಿ.ಆರ್.

9ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ನರೇಂದ್ರ ಮೋದಿ, ಜಿಎಸ್‌ಟಿ, ಆಧಾರ್ ಲಿಂಕ್ ಯೋಜನೆಗಳು ಒಳ್ಳೆಯದಾಗಿದೆ.
 2. ಬಿ.ಎಸ್. ಯಡಿಯೂರಪ್ಪ, ಪ್ರತಿಯೊಂದು ಸಮುದಾಯಕ್ಕೂ ಮೋಸವಾಗದ ರೀತಿಯಲ್ಲಿ ಅನುದಾನ ಕಲ್ಪಿಸಿಕೊಟ್ಟಿದ್ದರು. ರೈತರ ಪರ ಕಾಳಜಿ ಇರುವ ನಾಯಕ.
 3. ಕಾಂಗ್ರೆಸ್ ಬರಬಹುದು, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದು.
 4. ಅರಣ್ಯ ನಾಶದಿಂದ ಮಳೆ ಪ್ರಮಾಣ ಕುಂಠಿತವಾಗಿದೆ, ಕಾವೇರಿ ಸಮಸ್ಯೆ.
 5. ಬಯಲು ಶೌಚ ಮುಕ್ತ ರಾಜ್ಯವಾಗಬೇಕು, ಗುಡಿಸಲು ರಹಿತ ರಾಜ್ಯವಾಗಬೇಕು.
 6. ಮಹಿಳೆಗೂ ಅವಕಾಶ ಸಿಗಬೇಕು, ಉಮಾಶ್ರೀ ಸಿಎಂ ಆಗಬೇಕು.
 7. ರಸ್ತೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಕಸ ಎಸೆಯಬಾರದು ಎಂಬ ಅರಿವಂತೂ ಮೂಡಿದೆ.
 8. ನಾನು ಪ್ರಧಾನ ಮಂತ್ರಿ ಆದರೆ ಕೃಷಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುತ್ತೇನೆ.

ishwaryamಐಶ್ವರ್ಯ.ಎಂ.

9ನೇ ತರಗತಿ, ಭಾರತ ಸೇವಾದಲ ಶಾಲೆ, ಶೇಷಾದ್ರಿಪುರಂ, ಬೆಂಗಳೂರು.

 1. ನನ್ನ ನೆಚ್ಚಿನ ರಾಷ್ಟ್ರ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.
 2. ಯಡಿಯೂರಪ್ಪ, ಅವರು ಮುಖ್ಯಮಂತ್ರಿಯಾಗಿದ್ದಾಗ ರೈತಪರ ಯೋಜನೆಗಳನ್ನು ಆರಂಭಿಸಿದರು. ಸರ್ಕಾರಿ ನೌಕರರಿಗೆ ಅವರ ಕಾಲದಲ್ಲಿ ಸಿಕ್ಕಷ್ಟು ಸೌಲಭ್ಯ ಯಾವುದೇ ಕಾಲದಲ್ಲೂ ಸಿಕ್ಕಿಲ್ಲ.
 3. ಕಾಂಗ್ರೆಸ್ ಗೆಲ್ಲಬಹುದು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಾರದು.
 4. ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಒಂದು ವರ್ಷದಿಂದ ಹಾಗೆಯೇ ಬಿದ್ದಿವೆ. ಧೂಳಿನಿಂದ ನಾನಾ ರೋಗಗಳು ಬರುತ್ತಿವೆ.
 5. ಯಾವುದಾದರೂ ಕಾಮಗಾರಿಗೆ ರಸ್ತೆಗಳನ್ನು ಅಗೆದರೆ ಅದನ್ನು ಸರಿಯಾಗಿ ಮುಚ್ಚಿ ರಸ್ತೆ ಸರಿಮಾಡಬೇಕು. ರಸ್ತೆಗಳಲ್ಲಿನ ಮ್ಯಾನ್ ಹೋಲ್‌ಗಳ ಬಗ್ಗೆ ಪಾಲಿಕೆಯವರು ಗಮನಹರಿಸಬೇಕು.
 6. ಮಹಿಳೆಯರಿಗೂ ಅವಕಾಶ ಕೊಡಿ. ಉಮಾಶ್ರೀ ಸಿಎಂ ಆಗಲಿ.
 7. ಸ್ವಚ್ಛ ಭಾರತ ಆಂದೋಲನ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಿದೆ.
 8. ನಾನು ಪ್ರಧಾನ ಮಂತ್ರಿ ಆದರೆ ಕುಟುಂಬಕ್ಕೆ ಎರಡು ಮಕ್ಕಳು ಅದರಲ್ಲಿ ಒಂದು ಸೈನ್ಯಕ್ಕೆ ಕೊಡಬೇಕು ಎಂಬ ಕಾನೂನು ತಂದು ಸೇನೆಯನ್ನು ಸದೃಢಗೊಳಿಸಬೇಕು.
 • ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ
 • ಭಾವಚಿತ್ರದೊಂದಿಗೆ ಕಳುಹಿಸಿದರೆ ನಿಮ್ಮ ಅಭಿಪ್ರಾಯಗಳನ್ನು ಪ್ರಕಟಿಸಲಾಗುವುದು.
 • ಶಾಲೆಯ ಹೆಸರು ಮತ್ತು ವಿಳಾಸ ಕಡ್ಡಾಯ
 • ವಿವರಗಳಿಗಾಗಿ ಸಂಪರ್ಕಿಸಿ : 9449871871

Leave a Comment