ವಿದೇಶಿ ಟಿ20 ಲೀಗ್ ಗಳಲ್ಲಿ ಆಡಲು ಅವಕಾಶ ಕಲ್ಪಿಸುವಂತೆ ಉತ್ತಪ್ಪ ಮನವಿ

ನವದೆಹಲಿ, ಮೇ 22 -ವಿದೇಶಿ ಟಿ20 ಲೀಗ್ ಗಳಲ್ಲಿ ಆಡಲು ಅವಕಾಶ ಕಲ್ಪಿಸುವಂತೆ ಕನ್ನಡಿಗ ಸ್ಫೋಟಕ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ಮನವಿ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹೊರತುಪಡಿಸಿ ಭಾರತದ ಪುರುಷರ ತಂಡದ ಕ್ರಿಕೆಟಿಗರು ಇತರ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಬಿಸಿಸಿಐ ನಿರ್ಬಂಧ ವಿಧಿಸಿದೆ. ವಿದೇಶಿ ಟೂರ್ನಿಯಲ್ಲಿ ಆಡುವ ಸಂಬಂಧ ಈಗಗಾಲೇ ಹಲವು ಕ್ರಿಕೆಟಿಗರು ದನಿ ಎತ್ತಿದ್ದಾರೆ.
ಬಿಬಿಸಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಉತ್ತಪ್ಪ, ಬಿಸಿಸಿಐ ಈ ಕಟ್ಟುಪಾಡುಗಳನ್ನು ಮೊದಲು ತೆಗೆಯಬೇಕಿದೆ. ಇದರಿಂದ ಭಾರತೀಯ ಕ್ರಿಕೆಟಿಗರು ಸಾಧ್ಯವಾದಷ್ಟು ಇನ್ನಷ್ಟು ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಮತ್ತು ಬೆಳೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ದಯವಿಟ್ಟು ನಮಗೆ ಪ್ರಮಾಣಿಕವಾಗಿ ಆಡಲು ಒಪ್ಪಿಗೆ ನೀಡಿ. ಆಡಲು ಅವಕಾಶ ಇಲ್ಲವಾದರೆ ನೋವುಂಟಾಗಲಿದೆ. ವಿದೇಶಿ ಲೀಗ್ ಗಳಲ್ಲಿ ಆಡಲು ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ. ಕ್ರಿಕೆಟ್ ಅನ್ನು ಸಾಧ್ಯವಾದಷ್ಟು ಕಲಿಯಲು ಮತ್ತು ಬೆಳೆಯಲು ನೀವು ಬಯಸುತ್ತೀರಿ ಎಂದು ಹೇಳಿದ್ದಾರೆ

Leave a Comment