ವಿದೇಶಿ ಟಿ-20 ಆಡಲು ಬಿಸಿಸಿಐ ಅನುಮತಿ ಕೋರಿದ ಯುವರಾಜ್‌ ಸಿಂಗ್‌

ನವದೆಹಲಿ, ಜೂ 19 – ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ವಿದೇಶಿ ಟಿ-20 ಲೀಗ್‌ಗಳಲ್ಲಿ ಆಡಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅನುಮತಿ ಕೋರಿದ್ದಾರೆ.
” ಹಲವು ವಿದೇಶಿ ಟಿ-20 ಲೀಗ್‌ಗಳಲ್ಲಿ ಆಡಲು ಆಸಕ್ತಿ ಹೊಂದಿರುವ ಯುವರಾಜ್‌, ಬಿಸಿಸಿಐ ಅನುಮತಿ ಇಲ್ಲದೆ ಆಡಲು ಅವಕಾಶವಿಲ್ಲ. ಹಾಗಾಗಿ, ಅವರು ಭಾರತೀಯ ಕ್ರಿಕೆಟ್‌ ಮಂಡಳಿಗೆ ಅನುಮತಿ ಕೋರಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

37ರ ಪ್ರಾಯದ ಯುವರಾಜ್‌ ಸಿಂಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇನ್ನು ಮುಂದೆ ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ವಿದೇಶಿ ಟಿ-20 ಟೂರ್ನಿ ಆಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

” ಈ ವಯಸ್ಸಿನಲ್ಲಿ ನಾನು ಟಿ-20 ಕ್ರಿಕೆಟ್‌ ಖುಷಿಗಾಗಿ ಆಡಲಿದ್ದೇವೆ. ನನ್ನ ಜೀವನವನ್ನು ಉಲ್ಲಾಸ ಭರಿತವಾಗಿ ಆಹ್ಲಾದಿಸಲು ಬಯಸುತ್ತೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಯೋಚನೆ ಮಾಡುವುದು ಒತ್ತಡದಿಂದ ಕೂಡಿದೆ. ಹಾಗಾಗಿ, ಟಿ-20 ಟೂರ್ನಿಗಳನ್ನು ಆಡಲು ಬಯಸುತ್ತೇನೆ.” ಎಂದು ಮುಂಬೈನಲ್ಲಿ ಹೂನ್‌ 11 ರಂದು ಯುವರಾಜ್‌ ನಿವೃತ್ತಿ ಘೋಷಿಸುವ ವೇಳೆ ಹೇಳಿಕೊಂಡಿದ್ದರು.

ಹಲವು ವರ್ಷಗಳ ಕಾಲ ಭಾರತ ತಂಡದಲ್ಲಿ ಯುವರಾಜ್‌ ಅತ್ಯಂತ ಪ್ರಮುಖ ಆಟಗಾರರಾಗಿದ್ದರು. ಭಾರತ 2011ರ ಐಸಿಸಿ ವಿಶ್ವಕಪ್‌ ಚಾಂಪಿಯನ್‌ ಆಗುವಲ್ಲಿ ಯುವರಾಜ್‌ ಸಿಂಗ್‌ ಆಲ್ರೌಂಡರ್‌ ಪ್ರದರ್ಶನ ಅತ್ಯಂತ ಪ್ರಮುಖವಾಗಿತ್ತು. ಇವರು ಈ ಟೂರ್ನಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಎಡಗೈ ಬ್ಯಾಟ್ಸ್‌ಮನ್‌ 304 ಏಕದಿನ, 58 ಟಿ-20 ಹಾಗೂ 40 ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Leave a Comment