ವಿದೇಶದಲ್ಲಿ ಆಟಗಾರರ ಪತ್ನಿಯರು ಜತೆಗಿರಲಿ-ಕೊಹ್ಲಿ ಮನವಿ

ಹೈದರಾಬಾದ್, ಅ. ೭-ವಿದೇಶಿ ನೆಲದಲ್ಲಿ ನಡೆಯುವ ಸಂಪೂರ್ಣ ಸರಣಿ ವೇಳೆ ಆಟಗಾರರ ಪತ್ನಿಯರು ಜೊತೆಗಿರಬೇಕು ಎನ್ನುವುದು ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಇಂತಹದೊಂದು ಹೊಸ ಮನವಿ ಮಾಡಿರುವುದು ಅಚ್ಚರಿಯಾಗಿದ್ದರೂ ಸತ್ಯ ಎನ್ನುವುದನ್ನು ಕೆಲ ಮೂಲಗಳು ತಿಳಿಸಿವೆ
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಎರಡು ವಾರದ ಹಿಂದೆಯೇ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಬಿಸಿಸಿಐ ನಿಯಮದ ಅನ್ವಯ ತಂಡದ ಮ್ಯಾನೇಜರ್ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಬೇಕು.
ಹಳೆಯ ನಿಯಮದ ಪ್ರಕಾರ ವಿದೇಶಿ ಟೂರ್ನಿಯ ಸಂದರ್ಭದಲ್ಲಿ ಎರಡು ವಾರ ಮಾತ್ರ ಪತ್ನಿ ಜೊತೆಯಲ್ಲಿರಬಹುದು. ಈ ನಿಯಮವನ್ನು ಹಿಂಪಡೆದು ಸರಣಿಯ ಮುಕ್ತಾಯದವರೆಗೂ ಪತ್ನಿ ಜೊತೆಗಿರಬೇಕು ಎನ್ನುವುದು ಕೊಹ್ಲಿ ಬೇಡಿಕೆಯಾಗಿದೆ. ೨೦೦೭ರಲ್ಲಿ ಇಂಗ್ಲೆಂಡ್ ತಂಡ ಆಯಷಸ್ ಸರಣಿಯಲ್ಲಿ ೫-೦ ದಿಂದ ಹೀನಾಯವಾಗಿ ಆಸೀಸ್ ವಿರುದ್ಧ ಸೋತಿತ್ತು. ಆಗ ಕ್ರಿಕೆಟಿಗರ ಪತ್ನಿಯರೇ ಈ ಸೋಲಿಗೆ ಕಾರಣ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್? ಆರೋಪಿಸಿತ್ತು.
ಟೀಮ್ ಇಂಡಿಯಾ ನವೆಂಬರ್ ೨೧ರಿಂದ ಆಸ್ಟ್ರೇಲಿಯಾ ಪ್ರವಾಸ ಬೆಳಸಲಿದೆ. ಆಸೀಸ್ ನೆಲದಲ್ಲಿ ಮೂರು ಟಿ-ಟ್ವೆಂಟಿ, ನಾಲ್ಕು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ಜನವರಿ ೧೮ರಂದು ಪ್ರವಾಸ ಕೊನೆಗೊಳ್ಳಲಿದೆ.

 

Leave a Comment