ವಿದೇಶದಲ್ಲಿನ ಭಾರತೀಯರ ಕರೆತರಲು ವಿಮಾನಗಳು ಸಜ್ಜು

ನವದೆಹಲಿ,ಏ. 3-ಭಾರತದಲ್ಲಿರುವ ವಿವಿಧ ದೇಶಗಳ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿಸಲು ಏರ್ ಇಂಡಿಯಾ 18 ವಿಶೇಷ ವಿಮಾನಗಳು ಹಾರಾಟ ನಡೆಸಲಿವೆ.
ಭಾರತದಲ್ಲಿರುವ ಹಲವು ದೇಶದ ನಾಗರಿಕರನ್ನು ಸ್ವದೇಶಕ್ಕೆ ಮರಳಿಸಲು ವಿಶೇಷ ಕಾರ್ಯಾಚರಣೆ ಕೈಗೊಳ್ಳುವಂತೆ ದೆಹಲಿಯ ರಾಯಭಾರಿ ಕಚೇರಿಗಳಿಗೆ ಸಂಪರ್ಕಿಸಲಾಗಿದೆ ಹಾಗೂ ಈ ಸಂಬಂಧ 4 ದೇಶಗಳೊಂದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ.
ಭಾರತದಿಂದ ವಿದೇಶಿಯರನ್ನು ಸ್ವದೇಶಕ್ಕೆ ಮರಳಿಸಲು 18 ವಿಮಾನಗಳು ಕಾರ್ಯನಿರ್ವಹಿಸಲಿವೆ. ಜರ್ಮನಿಗೆ 10 ವಿಮಾನಗಳು, ಕೆನಡಾಕ್ಕೆ 6, ಫ್ರಾನ್ಸಿಗೆ 1 ಮತ್ತು ಐರ್ ಲ್ಯಾಂಡ್ ಗೆ 1 ವಿಮಾನ ಭಾರತದಿಂದ ವಿದೇಶಿಯರನ್ನು ಸ್ವದೇಶಕ್ಕೆ ಕರೆದೊಯ್ಯಲಿದೆ.
ಭಾರತಕ್ಕೆ ಹಿಂದಿರುಗುವ ಏರ್ ಇಂಡಿಯಾ ವಿಮಾನಗಳು ಯಾವುದೇ ಸರಕು ಅಥವಾ ಪ್ರಯಾಣಿಕರನ್ನು ಕರೆತರುವುದಿಲ್ಲ ಎಂದು ಏರ್ ಇಂಡಿಯಾ ಅಧ್ಯಕ್ಷ ರಾಜೀವ ಬನ್ಸಾಲ್ ತಿಳಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಅಂದರೆ ಏಪ್ರೀಲ್ 4 ಮತ್ತು 5 ರಂದು ದೆಹಲಿ-ಶಾಂಘೈ-ದೆಹಲಿ ಏರ್ ಇಂಡಿಯಾ ಕಾರ್ಯನಿರ್ವಹಿಸಲು ಅನುಮತಿ ದೊರೆತಿದ್ದು, ಅಲ್ಲಿಂದ ಭಾರತಕ್ಕೆ ವೈದ್ಯಕೀಯ ಉಪಕರಣಗಳನ್ನು ಸಾಗಿಸಲು ಏರ್ ಇಂಡಿಯಾಗೆ ಚೀನಾದ ಅನುಮತಿ ದೊರತಿರುವುದಾಗಿ ಬನ್ಸಾಲ್ ತಿಳಿಸಿದ್ದಾರೆ.
ಏಪ್ರೀಲ್ 6, 7,8 ಮತ್ತು 9 ರಂದು ಶಾಂಘೈಗೆ ಸರಕು ವಿಮಾನಗಳು ಮಾತ್ರ ಹಾರಾಟ ನಡೆಸಲು ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ.
ದೆಹಲಿ-ಹಾಂಕಾಂಗ್ -ದೆಹಲಿ ಸರಕು ವಿಮಾನ ಯಾನಕ್ಕೂ ಚೀನಾ ಅನುಮೋದನೆ ನೀಡಿದೆ. ಈ ವಿಮಾನಗಳಲ್ಲಿ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ತರಲಾಗುವುದೆಂದು ಹೇಳಿದ್ದಾರೆ.

Leave a Comment