ವಿಜ್ಞಾನ ಕಲಿಕೆಗೆ ಜ್ಞಾನಪ್ರೋ ಕಿಟ್

 

ಕಲಬುರಗಿ ಜೂ 18: ಕಲಬುರಗಿಯ ಸ್ವಾಮಿ ವಿವೇಕಾನಂದ ನಗರದ ಮಿಲೇನಿಯಂ ಶಾಲೆಯು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸಲು ನೂತನ ಪ್ರಯೋಗಕ್ಕೆ ಮುಂದಾಗಿದೆ.

ಜ್ಞಾನಪ್ರೋ ಸಂಸ್ಥೆಯು ತಯಾರಿಸಿದ ಪ್ರೋಸೈಸ್ಸಿಯಾ ಎಂಬ  ವಿಜ್ಞಾನದ ಕಲಿಕಾ ಕಿಟ್ ಅನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಈ ಕಿಟ್ ಅನ್ನು ಆಯಾ ತರಗತಿಯ ಪಠ್ಯಕ್ರಮವನ್ನು ಆಧರಿಸಿ ತಯಾರಿಸಲಾಗಿದೆ .ಶಾಲೆಯ ಐದನೆಯ ತರಗತಿಯಿಂದ ಎಂಟನೆಯ ತರಗತಿ ವಿದ್ಯಾರ್ಥಿಗಳಿಗೆ ಈ ಕಿಟ್ ನೀಡಲಾಗಿದೆ.ಈ ಕಲಿಕಾ ಸಾಧನದಿಂದ ವಿದ್ಯಾರ್ಥಿಗಳಲ್ಲಿ ಧಾರಣ ಮತ್ತು ನೆನಪಿನ ಶಕ್ತಿ ಹೆಚ್ಚಲಿದೆ ಎಂದು ಜ್ಞಾನಪ್ರೋ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಡಾ.ಸುಪ್ರೀತ್ ಕಿತ್ತನಕೆರೆ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷದಿಂದ ಮಿಲೇನಿಯಂ ಶಾಲೆಯಲ್ಲಿ ಜ್ಞಾನಪ್ರೋ ಕಿಟ್ ಅಳವಡಿಸಲಾಗಿದೆ.ಕೇಂದ್ರ ಸರ್ಕಾರದ ಅಟಲ್ ಇನೋವೇಷನ್ ಮಿಷನ್ ನವರು ಮಿಲೇನಿಯಂ ಶಾಲೆಯನ್ನು ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪಿಸಲು ಆಯ್ಕೆ ಮಾಡಿದ್ದಾರೆ ಎಂದರು

ಸುದ್ದಿಗೋಷ್ಠಿಯಲ್ಲಿ ಮಿಲೇನಿಯಂ ಶಾಲೆ ಪ್ರಾಂಶುಪಾಲ ಎಂ.ಎನ್ ಪಾಟೀಲ, ಜ್ಞಾನಪ್ರೋ ಸಂಸ್ಥೆಯ ಶಿಕ್ಷಣ ಸಂಯೋಜನಾಧಿಕಾರಿ ಅಖಿಲೇಶ ದೇಶಪಾಂಡೆ,ಶ್ರೀಶೈಲ ಘೂಳಿ ಉಪಸ್ಥಿತರಿದ್ದರು..

Leave a Comment