ವಿಜ್ಜಿ ಟ್ರಾಫಿ ಆಯ್ಕೆಗೆ ಸುಧನ್ವ ಕುಲಕರ್ಣಿ

ಧಾರವಾಡ ಫೆ.23– ನಗರದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿ.ಸಿ.ಕೆ.) ಪ್ರತಿಭಾನ್ವಿತ ಆಟಗಾರ ಸುಧನ್ವ ಉಲ್ಲಾಸ್ ಕುಲಕರ್ಣಿ, ಅಖಿಲ ಭಾರತ ವಿಜ್ಜಿ ಟ್ರಾಫಿ ಅಂತರ್ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ದಕ್ಷಿಣ ವಲಯ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಧಾರವಾಡದ ವಸಂತ ಮುರ್ಡೇಶ್ವರ್ ಕ್ರಿಕೆಟ್ ಅಕಾಡೆಮಿ (ವಿ.ಎಮ್.ಸಿ.ಎ.)ಯಲ್ಲಿ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ ಸುಧನ್ವ, ಮಾರ್ಚ 7 ರಿಂದ 12ರ ವರೆಗೆ ನಡೆಯಲಿರುವ ಸಿದ್ಧತಾ ಶಿಬಿರಕ್ಕೆ ಆಯ್ಕೆಯಾಗಿದ್ದು, ಶಿಬಿರದ ನಂತರ ಡೆಹರಾಡೂನ್‍ನಲ್ಲಿ ಮಾರ್ಚ 19ರಿಂದ ನಡೆಯಲಿರುವ ಅಖಿಲ ಭಾರತ ಟೂರ್ನಿಗೆ 15 ಆಟಗಾರರ ಅಂತಿಮ ತಂಡ ಪ್ರಕಟಿಸಲಾಗುವುದು.
ಕೆ.ಇ. ಬೋಡ್ರ್ಸ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ. ಮುಗಿಸಿ ಸದ್ಯ ಜೆ.ಎಸ್.ಎಸ್. ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿರುವ ಸುಧನ್ವ, ವಿಜ್ಜಿ ಟ್ರಾಫಿ ಪಂದ್ಯಾವಳಿಗಾಗಿ ಸುಮಾರು 12 ವರ್ಷಗಳ ನಂತರ ಆಯ್ಕೆಯಾಗಿರುವ ಧಾರವಾಡದ ಮೊದಲ ಆಟಗಾರವೆಂಬುದೊಂದು ವಿಶೇಷ.

Leave a Comment