ವಿಜೃಂಭಣೆಯ ವಾಸವಿ ಜಯಂತಿ

ಬಳ್ಳಾರಿ, ಮೇ.14: ಪ್ರತಿ ವರ್ಷದಂತೆ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಾಸವಿ ಜಯಂತಿ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಪ್ರತಿ ದಿನ ಬೆಳಿಗ್ಗೆ 7.00 ಗಂಟೆಯಿಂದ 12.00 ವರೆಗೆ ವಾಸವಿ ಹೋಮ ಮತ್ತು ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಲಕ್ಷ ಕುಂಕುಮಾರ್ಚನೆ, ಲಕ್ಷ ಪುಷ್ಪಾರ್ಚನೆ ಮತ್ತು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ 6.30 ಗಂಟೆಯಿಂದ 9.00 ಗೆ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳ್ಳಾರಿಯ ಜಿಲಾನಿ ಭಾಷರವರ ನೃತ್ಯ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಮತ್ತು ಶ್ರೀ ಕನ್ಯಕಾ ಪರಮೇಶ್ವರಿ ಭಜನೆ ಮಂಡಳಿಯವರಿಂದ ಮಕ್ಕಳ ನೃತ್ಯಕಾರ್ಯಕ್ರಮ ಮತ್ತು ದೀಪೋತ್ಸವ ನೃತ್ಯಗಳು ಬಹಳ ಆಕರ್ಷಣೀಯ ವಾಗಿದ್ದವು. ಪ್ರತಿದಿನ ಈ ಕಾರ್ಯಕ್ರಮ ನಂತರ ಬಂದ ಪ್ರೇಕ್ಷಕರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಊಟದ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿತ್ತು.

ಇಂದು ಹೋಮ ಅಭಿಷೇಕ ಮತ್ತು ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ನಂತರ ನಗರದ ಬೀದಿಗಳಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆರ್ಯವೈಶ್ಯ ಸಮಾಜ ಉತ್ಸವದಲ್ಲಿ ನಾಗಸ್ವರ, ಗೊಂಬೆಗಳ ನಡೆತ, ಮಹಿಳೆಯರ ವೀರಾಗಾಸೆ ಡೋಲ್ ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮಹಿಳೆಯರ ನೃತ್ಯ ಮತ್ತು ಹಾಡುಗಳು ಮೂಲಕ ಸಾಗಿತು.

ಈ ವಾಸವಿ ಜಯಂತಿ ಕಾರ್ಯಕ್ರಮ ನಡೆಸಲು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಆರ್ಯವೈಶ್ಯ ಅಸೋಷಿಯೇಷನ್, ನಗರೇಶ್ವರ ಸ್ವಾಮಿದೇವಸ್ಥಾನದ ಆಡಳಿತ ಮಂಡಳಿ, ವಾಸವಿ ಕಲ್ಯಾಣ ಮಂಟಪ, ವಾಸವಿ ಎಜ್ಯುಕೇಷನ್ ಟ್ರಸ್ಟ್ ಮತ್ತು ಆರ್ಯವೈಶ್ಯರ ಎಲ್ಲಾ ಸಂಘಗಳು ಸಹಕರಿಸಿದರು. ಈ ಉತ್ಸವ ನೇತೃತ್ವವನ್ನು ಶ್ರೀಸೊಂತಾ ಗಿರಿಧರ ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರೊಂದಿಗೆ ನೆರವೇರಿಸಲಾಯಿತು. ವಾಸವಿ ಈ ಸಂದರ್ಭದಲ್ಲಿ ಇಂಟರ್ ನ್ಯಾಷನಲ್ ಕ್ಲಬ್ ನವರಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. 100ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಭೈರಾಪುರ ನಾರಾಯಣ ಶೆಟ್ಟಿ ಮ್ಯಾನೆಜಿಂಗೆಟ್ರಷ್ಟಿಯವರ ನೇತೃತ್ವದಲ್ಲಿ ಪರ್ಮನೆಂಟು ಜಾಯಿಂಟ ಟ್ರಷ್ಟಿ ಪಿ.ಗೋವಿಂದಯ್ಯ ಶೆಟ್ಟಿ, ಜಾಯಿಂಟ್ ಟ್ರಷ್ಟಿಗಳಾದ ಗಾದೆಂ ಗೋಪಾಲಕೃಷ್ಣ, ವಿಟ್ಟಾ ಕೃಷ್ಣ ಕುಮಾರ್, ಟಿ.ಅಶ್ವಥನಾರಾಯಣ ಶೆಟ್ಟಿ, ಜಯಂತಿ ಕಿಶೋರ್ ಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಡಾ|| ರಮೇಶ್ ಗೋಪಾಲ್, ಜಯಪ್ರಕಾಶ, ಜೆ.ಗುಪ್ತ, ನಾಮ ರಮೇಶ, ನಾಮ ನಾಗರಾಜ, ವಿಟ್ಟಾ ಆನಂದ, ಟಿ.ಜಿ.ಪ್ರಸಾದ್ ಅವರ ಸಹಕಾರದಿಂದ ಮತ್ತು ಬಳ್ಳಾರಿ ನಗರದ 102 ಗೋತ್ರದ ಆರ್ಯವೈಶ್ಯ ಬಂಧುಗಳ ಪ್ರೋತ್ಸಾಹದಿಂದ ನಡೆಸಲಾಯಿತು.

ದೇವಸ್ಥಾನದ ಗರ್ಭಗುಡಿಯಲ್ಲಿರುವ ಅಮ್ಮನವರಿಗೆ ಕೌಕುಂಟ್ಲ ಹರಿಮೋಹನ್ ಗುಪ್ತ ರವರ ನೇತೃತ್ವದಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಮತ್ತು 5 ದಿನದ ಪೂಜಾ ಮತ್ತು ಹೋಮಗಳ ವ್ಯವಸ್ಥೆಯನ್ನು ಕೌಕುಂಟ್ಲ ಹರಿಮೋಹನ್ ಗುಪ್ತ, ಟಿ.ಅಶ್ವಥನಾರಾಯಣ ಶೆಟ್ಟಿ, ಗಾದೆಂ ಗೋಪಾಲಕೃಷ್ಣ, ಬಿ.ವಿ.ರಾಂಪ್ರಸಾದ್ ರವರಿಂದ ನೆರವೇರಿಸಲಾಯಿತು.

Leave a Comment