ವಿಜೃಂಭಣೆಯಿಂದ ಜರುಗಿದ ಮಲೆ ಮಹದೇಶ್ವರ ದೀಪಾವಳಿ ಜಾತ್ರೆ

ಚಾಮರಾಜನಗರ. ನ.8- ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿಯ ಜಾತ್ರೆಯು ವಿಜೃಬಣೆಯಿಂದ ನಡೆಯಿತು. ಬೆಳಗ್ಗೆ 8.ಗಂಟೆಗೆ ಪ್ರಾರಾಂಭವಾದ ರಥೋತ್ಸವ 9.45 ಸಮಯಕ್ಕೆ ರಥವು ಸ್ವ ಸ್ಥಾನವನ್ನು ಸೇರಿತು.
ರಥೋತ್ಸವಕ್ಕೆ ಜಿಲ್ಲೆಯ ಭಕ್ತಧಿಗಳು ಹಾಗೂ ಹೊರಜಿಲ್ಲೆಯ ಮಹದೇಶ್ವರಸ್ವಾಮಿಯ ದರ್ಶನ ಪಡೆದರು. ಗೊರವನಕುಣಿತ, ವೀರಾಗಸೆ, ತಮಟೆನೃತ್ಯ, ಇನ್ನು ಮುಂತಾದ ನೃತ್ಯಗಳು ರಥೋತ್ಸವದಲ್ಲಿ ಜನರ ಗಮನ ಸೆಳೆಯಿತು. ಸಾರ್ವಜನಿಕರ ಅರೋಗ್ಯದ ದೃಷ್ಠಿಯಿಂದ ಚಾಮರಾಜನಗರ ಜಿಲ್ಲಾಡಳಿತವು ಮೊಬೈಲ್ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣದ ಅನುಕೂಲವನ್ನು ಮಾಡಲಾಗಿತ್ತು ಜಾತ್ರೆಗೆ ಲಕ್ಷಂತರ ಜನರು ಅಗಮಿಸಿದ್ದರು.

Leave a Comment