ಚಾಮುಂಡಿಗೆ ಯುವರಾಜ ಯದುವೀರ್ ವಿಶೇಷ ಪೂಜೆವತೆಯ ವರ್ಧಂತೋತ್ಸವ

ಮೈಸೂರು. ಆ.3- ಆಷಾಢ ಮಾಸದ 3 ನೇ ಶುಕ್ರವಾರ ಹಾಗೂ ವರ್ಧಂತೋತ್ಸವವಾದ ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ದೇವಾಲಯದ ಪ್ರಧಾನ ಅರ್ಚಕ ಶಶಿಧರ ದೀಕ್ಷಿತ್‍ರವರ ನೇತ್ರತ್ವದಲ್ಲಿ ಇಂದು ಮುಂಜಾನೆ 5-30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತಭಿಷೇಕ, ಸಹಸ್ರನಾಮಾರ್ಚನೆಗಳನ್ನು ಮಾಡಿದ ನಂತರ ಬೆಳಗ್ಗೆ 9-30ಕ್ಕೆ ಗಂಟೆಗೆ ಮಹಾಮಂಗಳಾರತಿ ನೆರವೇರಿತು. ನಂತರ ಬೆಳಿಗ್ಗೆ 10-25 ಕ್ಕೆ ಅಮ್ಮನವರಿಗೆ ಚಿನ್ನದ ಪಲ್ಲಕ್ಕಿ ಉತ್ಸವವು ದೇವಾಲಯದ ಸುತ್ತಲೂ ಒಂದು ಸುತ್ತು ಬಂದಿತು. ಇದನ್ನು ವೀಕ್ಷಿಸಿದ ಸಾವಿರಾರು ಮಂದಿ ಭಕ್ತಾಧಿಗಳು ತಮ್ಮ ಕಣ್ಮನಗಳನ್ನು ತುಂಬಿಕೊಂಡರು.

ಇಂದು ನಾಡದೇವತೆಯ ವರ್ಧಂತಿಯೂ ಸಹಾ ಜರುಗಿದ್ದು, ಮೈಸೂರಿನ ರಾಜ ಮನೆತನದವರಿಂದ ನಾಡದೇವತೆ ಚಾಮುಂಡೇಶ್ವರಿ ದೇವತೆಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯುವರಾಜ ಯದುವೀರ್ ಮೊದಲ ವಿಶೇಷ ಪೂಜೆ ಸಲ್ಲಿಸಿದರು.

ಈ ವಾರ ಬೆಂಗಳೂರಿನ ಎಸ್. ಎಫ್.ಎಸ್. ತ್ಯನಾರಾಯಣ ಫ್ಲವರ್ ಮಾರ್ಟ್ ಇವರ ವತಿಯಿಂದ ದೇವಿಗೆ ಹಾಗೂ ದೇವಾಲಯದ ಒಳಗೆ ಮತ್ತು ಹೊರಗೆ ವಿವಿಧ ರೀತಿಯ ಹೂಗಳಿಂದ ವಿವಿಧ ಹೂಗಳಿಂದ ಅಲಂಕಾರಿಸಿದ್ದು ಭಕ್ತಾಧಿಗಳ ಗಮನ ಸೆಳೆಯಿತು.

ಪ್ರಸಾದ ವಿನಿಯೋಗ

ನಾಡದೇವತೆಯ ದರ್ಶನಕ್ಕಾಗಿ ಆಗಮಿಸಿದ ಭಕ್ತಾಧಿಗಳಿಗೆ ದೇವಸ್ಥಾನದ ಸಮಿತಿ ವತಿಯಿಂದ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಹಾಗೂ ರಾತ್ರಿ ವೇಳೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರಕ್ಕೆ ಅವಲಕ್ಕಿ ಉಪ್ಪಿಟ್ಟು ಸಿಹಿ ಅವಲಕ್ಕಿಗಳನ್ನು ನೀಡಲಾಯಿತು. ಮದ್ಯಾನ್ಹ ಊಟಕ್ಕೆ ಲಾಡು ತರಕಾರಿ ಪಲಾವ್, ಅನ್ನ ಸಾಂಬಾರ್ ಎರಡು ರೀತಿಯ ಪಲ್ಯ, ಉಪ್ಪಿನಕಾಯಿ ಹಾಗೂ ಮಜ್ಜಿಗೆಗಳನ್ನು ಕೊಟ್ಟರೆ, ರಾತ್ರಿ ಊಟಕ್ಕೆ ಬಾದುಷಾ, ವಾಂಗೀಬಾತ್ , ಅನ್ನ ಸಾಂಬಾರು, ರಸಂ, ಕೋಸಂಬರಿ, ಉಪ್ಪಿನಕಾಯಿ ಹಾಗೂ ಮಜ್ಜಿಗೆಯನ್ನು ನೀಡಲಾಯಿತು. ಇದಲ್ಲದೆ ನಾಡ ದೇವತೆಗೆ ಹರಕೆ ಹೊತ್ತವರು ಬೆಟ್ಟದ ವಿವಿದೆಡೆ ವಿವಿಧ ಬಗೆಯ ಪ್ರಸಾದಗಳನ್ನು ಸಿದ್ದಪಡಿಸಿ ತಾವೂ ಸೇವಿಸಿ ಬಂದ ಭಕ್ತಾಧಿಗಳಿಗೂ ಪ್ರಸಾದದ ರೀತಿಯಲ್ಲಿ ವಿನಿಯೋಗ ಮಾಡಿದರು.

ಬಸ್ ವ್ಯವಸ್ಥೆ:

ಈ ಹಿಂದಿನ ಎರಡು ವಾರಗಳಲ್ಲಿ ಆಯೋಜಿಸಿದ್ದಂತೆ ಈ ವಾರವೂ ಲಲಿತ ಮಹಲ್ ಹೆಲಿಪ್ಯಾಡ ನಿಂದ ಬೆಟ್ಟಕ್ಕೆ ತೆರಳುವ ಭಕ್ತಾಧಿಗಳಿಗೆ ಕ.ರಾ.ರ.ಸಾ. ನಿಗಮದಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಬೆಟ್ಟದ ಮೇ¯ಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.

ಪೊಲೀಸ್ ಸೂಕ್ತ ಬಂದೋಬಸ್ತ್

ಚಾಮುಂಡಿ ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆಗಳು ನೆಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ ಮಾಡಲಾಗಿತ್ತು. ಬೆಟ್ಟದಲ್ಲಿ ಹಲವೆಡೆ ಸಿ.ಸಿ. ಕ್ಯಾಮರಗಳನ್ನೂ ಸಹಾ ಅಳವಡಿಸಲಾಗಿತ್ತು.

Leave a Comment