ವಿಜಾನ, ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿದೆ

ಚಾಮರಾಜನಗರ, ಅ. 16 – ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಕೌತುಕತೆಯನ್ನು ಬೆಳೆಸಿಕೊಂಡು ದೇಶದ ಅಭಿವೃದ್ದಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಇಸ್ತ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‍ಕುಮಾರ್ ಕರೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆಯ ಪ್ರಥಮ ವರ್ಷದ ಸಂಸ್ಥಾಪನಾ ದಿನ ಹಾಗೂ ವಿದ್ಯಾರ್ಥಿಗಳ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರದಿಂದ ಜನಸಾಮಾನ್ಯರಿಗೆ ಹೊಸ ಹೊಸ ಸವಲತ್ತುಗಳನ್ನು ಕಲ್ಪಿಸಲು ಸಹಕಾರಿಯಾಗಿದೆ
ವಿಜ್ಞಾನ ಬೆಳೆದಷ್ಟು ಸಮಾಜ ಮತ್ತು ಸಮುದಾಯಗಳು ಬೆಳವಣಿಗೆಯಾಗುತ್ತದೆ. ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹೆಚ್ಚಿನ ಜ್ಞಾನವನ್ನು ನೀಡಿದೆ. ಅದೇ ರೀತಿ ಅನಕ್ಷರಸ್ಥರಿಗೂ ಸಹ ವಿಜ್ಞಾನ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದೆ. ಹವಾಮಾನ ವರದಿ, ಮಳೆ ಮತ್ತು ಇತರೇ ಮಾಹಿತಿಗಳನ್ನು ನೀಡುವ ಮೂಲಕ ಅವರನ್ನು ಜಾಗೃತರಾಗುವಂತೆ ಮಾಡುತ್ತಿದೆ ಎಂದರು.
ಇತ್ತೀಚೆಗೆ ನಡೆಸಿದ ಇಸ್ತ್ರೊ ನಡೆಸಿದಿ ಚಂದ್ರಯಾನ -2 ಭಾರತ ದೇಶದತ್ತ ಇಡೀ ವಿಶ್ವವೇ ನೋಡುವಂತೆ ಮಾಡುತ್ತಿದೆ. ವಿಜಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶವು ಇತರೇ ದೇಶಗಳಿಂದ ಮುಂಚೂಣಿಯಲ್ಲಿದೆ. ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದ್ದಂತೆ ಮನುಷ್ಯ ದೈನಂದಿನ ಜೀವನ ಶೈಲಿ ಬದಲಾವಣೆಯಾಗಿದೆ ಎಂದರು.
ರಾಷ್ಟ್ರಪತಿಗಳಾಗಿದ್ದ ವಿಜ್ಞಾನಿ ಎ.ಜಿ.ಪಿ. ಅಬ್ದುಲ್ ಕಲಾಂ ಅವರ ಜನ್ಮ ವಾಗಿದ್ದು, ಅವರ ಹುಟ್ಟಿದ ದಿನವೇ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆ ಸ್ಥಾಪನೆಗೊಂಡಿದೆ. ಒಂದು ವರ್ಷವನ್ನು ಪೊರೈಸುವ ಮೂಲಕ ಈ ವಿಜ್ಞಾನ ಬಗ್ಗೆ ಮಕ್ಕಳಿಗೆ ಎಲ್ಲಾ ರೀತಿಯ ನೆರವು ಹಾಗು ಆಸಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅಬ್ದುಲ್ ಕಲಾಂರ ಅಶಯದಂತೆ ಇಂಥ ಸಂಸ್ಥೆಗಳು ಹೆಚ್ಚು ಬೆಳೆಯಲಿ ದೆಂದು ಆಶಿಸಿದರು.
ಡಾ. ವಿಕ್ರಮ್ ಸಾರಾಬಾಯಿ ಅವರು ಇಸ್ರೋ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಇಂದು ಇಸ್ತ್ರೊ ಬೃಹತಕಾರವಾಗಿ ಬೆಳೆದಿದೆ. ಈ ಮೂಲಕ ದೇಶದ ಎಲ್ಲರಿಗು ಹೆಚ್ಚಿನ ಅನುಕೂಲವಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಗ್ರ್ಯಾವಿಟಿ ಸೈನ್ಸ್ ಸಂಸ್ಥೆಯು ಜಿಲ್ಲೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿದೆ. ಕಿರಣ್‍ಕುಮಾರಂತ ಮಹಾನ್ ವ್ಯಕ್ತಿಗಳನ್ನು ನಮ್ಮ ಜಿಲ್ಲೆಗೆ ಕರೆಸಿರುವ ಸಂಸ್ಥೆಯ ಶ್ರಮ ಶ್ಲಾಘನೀಯ. ಈ ಸೇವೆ ಇನ್ನು ಹೆಚ್ಚು ನಡೆಯಲಿ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಅಭಿವೃದ್ದಿಗೆ ನಾಂದಿಯಾಗಿದೆ. ವಿದ್ಯಾರ್ಥಿಗಳು ಸೈನ್ಸ್ ಓದಿ ಡಾಕ್ಟರ್, ಇಂಜಿನಿಯರ್ ಆಗುವ ಜೊತೆಗೆ ಇಸ್ತ್ರೊ ಸೇರಿ ವಿಜ್ಞಾನಿಗಳಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್. ಅಭಿಷೇಕ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ಒಂದು ವರ್ಷಗಳಲ್ಲಿ ಗ್ರ್ಯಾವಿಟಿ ಸೈನ್ಸ್ ಸಂಸ್ಥೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮುಂದಿನ ಧ್ಯೇಯೊದ್ದೇಶಗಳ ಬಗ್ಗೆಮಾಹಿತಿ ನೀಡಿದರು. ವಿದ್ಯಾರ್ಥಿಗಳು ಹಾಗು ವಿಜ್ಞಾನಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಇಸ್ತ್ರೋದ ಹಿರಿಯ ವಿಜ್ಞಾನಿ ಮತ್ತು ಸಂಸ್ಥೆಯ ಸಲಹೆಗಾರರಾದ ಸಿ.ಡಿ. ಪ್ರಸಾದ್ ಜಿ.ಪಂ. ಸಿಇಓ ಹರ್ಷಲ್ ಬೋಯರ್ ನಾರಾಯಣರಾವ್, ಎಎಸ್ಪಿ ಅನಿತಾ ಹದನವರ್, ಫೌಂಡೇಷನ್ ಅಧ್ಯಕ್ಷ ಎಸ್. ಪ್ರಕಾಶ್, ಕಾರ್ಯರ್ಶಿ ಎ.ಎಸ್. ಅಭಿಷೇಕ್, ಸಂಸ್ಥೆಯ ಗೌರವ ಅಧ್ಯಕ್ಷರಾದ ಜೆಎಸ್‍ಎಸ್ ಅಂಗರಚನ ಶಾಸ್ತ್ರದ ಪ್ರಾಧ್ಯಾಪಕ ಡಾ. ಎನ್.ಎಂ. ಶ್ಯಾಮಸುಂದರ್, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲಾ, ಮಂಜುನಾಥ್, ಸಂಸ್ಥೆಯ ಉಪಾಧ್ಯಕ್ಷ ಭವಾನಿ ಶಂಕರ್, ಖಜಾಂಚಿ ಪುಷ್ಕಲ್ ಮುರುಳಿ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment