ವಿಜಯ್, ಕಾಮಕೋಟಿ ಎಸಿಸಿಎಸ್ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು, ಸೆ.೬- ಬೆಂಗಳೂರಿನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊ.ಪಿ.ವಿಜಯ್ ಕುಮಾರ್ ಹಾಗೂ ಮದ್ರಾಸ್ ನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರೊ.ವಿ.ಕಾಮಕೋಟಿ ಅವರು ಈ ಬಾರಿಯ ಪ್ರತಿಷ್ಠಿತ ಎಸಿಸಿಎಸ್ – ಸಿಡಿಎಸಿ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಬೆಂಗಳೂರು ಐಐಐಟಿಬಿ ಸಂಸ್ಥೆ ನಿರ್ದೇಶಕ ಪ್ರೊಎಸ್.ಗೋಪನ್ ಹಾಗೂ ಆಡ್ವಾನ್ಸ್ ಡ್ ಕಂಪ್ಯೂಟೆರಿಂಗ್ ಕಮ್ಯೂನಿಕೇಷನ್ ಸೊಸೈಟಿಯ ಅಧ್ಯಕ್ಷ ಡಾ.ಸರಗೂರು ಶ್ರೀ ನಿಧಿ ಈ ವಿಷಯವನ್ನು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಪ್ರಮುಖ ವಿದ್ವಾಂಸರು ಹಾಗೂ ಸಂಶೋಧಕರಿಗೆ ಮಾತ್ರ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಂದ ಅವರು ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಸೆ.21 ರಂದು ಐಐಐಟಿಬಿ ನಡೆಯಲಿರುವ ಕಂಪ್ಯೂಟಿಂಗ್ ಕಮ್ಯೂನಿಕೇಷನ್ ವಾರ್ಷಿಕ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು.
ಪ್ರೊ.ವಿಜಯ್ ಕುಮಾರ್ ಅವರು ವಿಸಿಡಿಎಂಎ ಸೆಲೂಲ್ಯಾರ್ ಪ್ರಮಾಣೀತಗಳಲ್ಲಿ ಅಳವಡಿಸಲಾಗುವ ವೈರ್ ಲೆಸ್ ಸಂವಾಹನ ವಿನ್ಯಾಸದಲ್ಲಿ ದೋಷ ಸರಿಪಡಿಸುವ ಕೋಡ್ ಗಳ ಸಂರಚನೆಯಲ್ಲಿ ಮೂಲದಾರ ಸ್ವರೂಪಿ ಸಂಶೋಧನೆ ನಡೆಸಿರುವ ಸಂಶೋಧನೆಗೆ ಮತ್ತು ಪ್ರೊ. ಕಾಮಕೋಟಿ ಅವರು ವಿಎಲ್ಎಸ್ಐ ವಿನ್ಯಾಸ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ಹಾಗೂ ಕಂಪ್ಯೂಟರ್ ಸಂರಚನ ವಲಯದಲ್ಲಿ ಭಾರತದ ಪ್ರಥಮ ರಿಸ್ಕ್-ವಿ ಪ್ರೊ. ಅಭಿವೃದ್ಧಿ ಪಡಿಸಿರುವ ಗಣನೀಯ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

Leave a Comment