ವಿಜಯನಗರ ಜಿಲ್ಲೆ ರಚನೆಗೆ ವಿರೋಧ

(ನಮ್ಮ ಪ್ರತಿನಿಧಿಯಿಂದ)
ಬಳ್ಳಾರಿ, ಸೆ. ೨೧- ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ವಿರೋಧ ವ್ಯಕ್ತವಾಗಿದೆ.
ಅಖಂಡ ಬಳ್ಳಾರಿ ಜಿಲ್ಲೆಯನ್ನು ಉಳಿಸಿಕೊಳ್ಳಬೇಕೆಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಪ್ರತಿಪಾದಿಸಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಸಮಿತಿಯ ಮುಖಂಡರುಗಳಾದ ಕುಡುತಿನಿ ಶ್ರೀನಿವಾಸ್, ಟಪಾಲ್ ಗಣೇಶ್, ಮೇಕಲ ಈಶ್ವರ ರೆಡ್ಡಿ. ದರೂರು ಪುರುಷೋತ್ತಮಗೌಡ, ಶಾಂತನಗೌಡ, ಸಿದ್ದರಾಮ ಕಲ್ಮಠ ಮೊದಲಾದವರು ಅಖಂಡ ಬಳ್ಳಾರಿ ಜಿಲ್ಲೆ ಹಾಗೇ ಉಳಿಯಬೇಕು. ಒಂದೊಮ್ಮೆ ವಿಭಜನೆ ಮಾಡಲೇಬೇಕೆಂದರೆ ಹೊಸಪೇಟೆಯನ್ನು ಬಿಟ್ಟು, ಕೂಡ್ಲಿಗಿ, ಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ ಯಾವುದಾದರು ಒಂದು ಪಟ್ಟಣವನ್ನು ಕೇಂದ್ರವನ್ನಾಗಿಸಲಿ ಎಂದು ಹೇಳಿದರು.
ಹೊಸಪೇಟೆ ಮತ್ತು ಸಂಡೂರು ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿಯೇ ಮುಂದುವರಿಯಬೇಕೆಂದು ಆಗ್ರಹಿಸಿದರು.
ಹೊಸ ಜಿಲ್ಲೆ ಬೇಕೆಂದು ಯಾರೂ ಕೇಳಿರಲಿಲ್ಲ. ಆದರೆ ಉಪ ಚುನಾವಣೆ ಬರುತ್ತಿರುವುದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನರ್ಹ ಶಾಸಕ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ ಅದಕ್ಕಾಗಿ‌ ನಮ್ಮ ವಿರೋಧವಿದೆ ಎಂದು ಅವರುಗಳು ಹೇಳಿದರು..
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ‌ಕಲ್ಮಠ ಅವರು ಜಿಲ್ಲೆಯ ಎಲ್ಲಾ 11 ತಾಲೂಕುಗಳ ಜನಾಭಿಪ್ರಾಯ ಪಡೆದು ಆ ಕಾರ್ಯ ನಡೆಯಲಿ. ಅದಿಲ್ಲದೆ ನಡೆದಿರುವ ಬೆಳವಣಿಗೆಯನ್ನು ಖಂಡಿಸುವುದಾಗಿ ಹೇಳಿದರು.
ಬಿಜೆಪಿಯ ಶಿಶಿಕಲಾ ಅವರು ಬೇಕಾದರೆ ಬಳ್ಳಾರಿ ಜಿಲ್ಲೆಗೆ ವಿಜಯನಗರ ಜಿಲ್ಲೆ ಎಂದು ಹೆಸರಿಡಲಿ ಎಂದರು. ಶ್ರೀನಿವಾಸ್ ಅವರು ಅಖಂಡ ಜಿಲ್ಲೆಗಾಗಿ‌ ಸೆ22 ರಂದು‌ ದುರ್ಗಮ್ಮ ದೇವಸ್ಥಾನದಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ. ಸೆ 24 ರಂದು ಉಪವಾಸ ಸತ್ಯಾಗ್ರಹ, ಸೆ 26 ರಂದು ಕಪ್ಪು ಪಟ್ಟಿ ಪ್ರದರ್ಶನ , ನಂತರ ಪಂಜಿನ‌ಮೆರವಣಿಗೆ ಹೀಗೆ ನಿರಂತರ ಹೋರಾಟ ನಡೆಸಲಿದೆ. ಮುಖ್ಯ ಮಂತ್ರಿಗಳು ತಮ್ಮ ಶಿಫಾರಸ್ಸನ್ನು ಹಿಂದಕ್ಕೆ ಪಡೆಯಬೇಕೆಂದು‌ ಪುರುಷೋತ್ತಮಗೌಡ ಹೇಳಿದರು.
ವಿಜಯನಗರ ಜಿಲ್ಲೆ ರಚನೆಗೆ‌ ಬೆಂಬಲಿಸಿ ವಿಧಾನ‌ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ ಅವರು ಮನವಿ ಸಲ್ಲಿಸಿರುವುದಕ್ಕೆ ಬೆಂಬಲ ನೀಡಿರುವುದು ಸರಿಯಲ್ಲ, ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದು ಮೇಕಲ ಈಶ್ವರರೆಡ್ಡಿ‌ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಹಾರುದ್ರಗೌಡ, ಎರ್ರಿಸ್ವಾಮಿ, ಬಿಸಲಹಳ್ಳಿ ಬಸವರಾಜ್, ಮಧುನಾಯ್ಕ, ಎಸ್.ಬಾಗರಾಜ್, ಜಯರಾಂ ಚೌದರಿ ಮೊದಲಾದವರು ಇದಗದರು

Leave a Comment