ವಿಜಯದಶಮಿ-ವಿಶೇಷ ಪೂಜೆ

ಮುಂಡಗೋಡ,ಅ10:ವಿಜಯದಶಮಿ ಪ್ರಯುಕ್ತ ಪಟ್ಟಣದ ಬನ್ನಿಕಟೆ ಶ್ರೀ ಬನ್ನಿ ಮಹಾಕಾಳಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದಲೇ ದಂಡುದಂಡಾಗಿ ಆಗಮಿಸಿದ ಮಹಿಳೆಯರು ಸರದಿಯಲ್ಲಿ ನಿಂತು ಬನ್ನಿಕಟ್ಟೆಗೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಶಿವಲಿಂಗಪ್ಪ ಗೌಳಿ ಅವರಿಂದ ಅನ್ನ ಪ್ರಸಾದ ಹಾಗೂ ಆಟೋ ಚಾಲಕರು ಮಾಲಕರ ಸಂಘದಿಂದ ಸಿಹಿ ಪ್ರಸಾದ ವಿತರಣೆ ಮಾಡಲಾಯಿತು.

Leave a Comment