ವಿಚ್ಛೇದನಕ್ಕೆ ಮುಂದಾದ ನಟಿ ಶ್ವೇತಾಬಸು

ನವದೆಹಲಿ, ಜ. ೨೨- ವೇಶ್ಯಾವಾಟಿಕೆಯಲ್ಲಿ ಸಿಕ್ಕು ಬಿದ್ದಿದ್ದು, ತೆಲುಗು ನಟಿ ಶ್ವೇತಬಸು. ತಮ್ಮ ಪತಿಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ವೇಶ್ಯಾವಾಟಿಕೆ ಪ್ರಕರಣದಲ್ಲಿ ಜ್ಯೋತಿ ಬಸು ಸಿಕ್ಕಿ ಬಿದ್ದಿದ್ದರು. ವಿವಾಹವಾದ ಒಂದು ವರ್ಷದ ನಂತರ ಅವರು ಈ ತೀರ್ಮಾನಕ್ಕೆ ಬಂದಿದ್ದು, ಪತಿಯಿಂದ ವಿಚ್ಛೇದನ ಪಡೆಯುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗೂ ಶ್ವೇತಬಸು ಹಾಗೂ ಪತಿ ರೋಹಿತ್ ಮಿಥಲ್ ಅವರೊಂದಿಗೆ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆಯುವುದಾಗಿ ತಿಳಿಸಿದ್ದಾರೆ.
ಹಿಂದಿ, ಬೆಂಗಾಲಿ, ತೆಲುಗು, ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಶ್ವೇತಬಸು ಈ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮುಂದೆ ನಾನು ಹಾಗೂ ರೋಹಿತ್ ಸ್ನೇಹಿತರಾಗಲು ಬಯಸುತ್ತೇನೆ. ೫ ವರ್ಷಗಳ ಕಾಲ ಪ್ರೀತಿಯ ಆರೋಗ್ಯಕರ ಮತ್ತು ನಿಷ್ಠಾವಂತ ಸಂಬಂಧವನ್ನು ಹೊಂದಿದ್ದೇವೆ. ಈ ಮೂಲಕ ನಾವು ಮದುವೆಯನ್ನು ಕೊನೆಗಣಿಸಿ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ ಎಂದು ತಿಳಿಸಿದ್ದಾರೆ.
ನಾನು ಹಾಗೂ ಮಿಥಲ್ ಬೇರೆ, ಬೇರೆ ದಾರಿಯಲ್ಲಿ ಹೋಗಲು ನಿರ್ಧರಿಸಿದ್ದೇವೆ. ಹಲವು ತಿಂಗಳಗಳು ಯೋಚಿಸಿ, ಪರಸ್ಪರ ಹಿತದೃಷ್ಟಿಯಿಂದ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಬಸು ತಿಳಿಸಿದ್ದಾರೆ.

Leave a Comment