ವಿಚಿತ್ರ ಕಾಯಿಲೆ ಕುರಿಗಳು ಸಾವು

ಹೊಸಪೇಟೆ, ಸೆ8: ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ವಿಚಿತ್ರ ಕಾಯಿಲೆಗೆ ಕುರಿ ಮರಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ ಎರಡ್ಮೂರು ದಿನಗಳಲ್ಲಿ 40ಕ್ಕೂ ಹೆಚ್ಚು ಮರಿಗಳು ಮೃತಪಟ್ಟಿವೆ. ಚಿಕ್ಕೋಡಿ ಭಾಗದ ನಾಗರಮನವಳ್ಳಿ ಗ್ರಾಮದ ದರಿಯಪ್ಪ ಮಾರುತಿ ಪೂಜಾರಿ, ಶ್ರೀಕಾಂತ ಮಾರುತಿ ಪೂಜಾರಿ, ಬೀರಪ್ಪ ಮಾರುತಿ ಪೂಜಾರಿ ಹಾಗೂ ನಾಗರತ್ನಮ್ಮ ಎಂಬುವರಿಗೆ ಈ ಕುರಿಗಳು ಸೇರಿವೆ.

ಹುಲ್ಲುಗಾವಲಿನಲ್ಲಿ ಮೇಯುತ್ತಿರುವಾಗ ಏಕಾಏಕಿ ಮೂರ್ಛೆ ಬೀಳುತ್ತಿವೆ. ನಂತರ ಬಾಯಲ್ಲಿ ನೊರೆ ಬಂದು ಕುರಿ ಮರಿಗಳು ಜೀವ ಬಿಡುತ್ತಿವೆ. ಈ ಕುರಿತು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೆ ಮೂರು ದಿನಗಳಾದರೂ ಬಂದಿಲ್ಲ ಎನ್ನುತ್ತಾರೆ ಕುರಿಗಾಹಿಗಳು.

ಈ ಕುರಿತು ಪಶು ವೈದ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ವಿಷಯ ಗಮನಕ್ಕೆ ಬಂದಿದೆ. ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವಂತೆ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದರು.

Leave a Comment