ವಿಚಾರವಂತಹ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣವಾಗಲಿ :ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಜೂ 10 -ಮೇರು ಸಾಹಿತಿ, ನಾಟಕಕಾರ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ಅಗಲಿಕೆಯಿಂದ ಪ್ರಗತಿಪರ ವಿಚಾರಗಳಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಇಂತಹ ವಿಚಾರವಂತರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣವಾಗಬೇಕು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ನಾಡ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಸಾಹಿತ್ಯ ಲೋಕದಲ್ಲಿಯೂ ಕಾರ್ನಾಡ್ ಕೊಡುಗೆ ಬಹಳಷ್ಟಿದೆ.ವಿಚಾರವಂತರ ಹೆಸರಲ್ಲಿ ಸ್ಮಾರಕಗಳು ನಿರ್ಮಾಣವಾಗುವುದರಿಂದ ಅವರ ತತ್ವಗಳು ಜೀವಂತವಾಗಿ ಉಳಿಯುತ್ತವೆ. ನಿರ್ಭೀತಿಯಿಂದ ಮಾತನಾಡುವ ವ್ಯಕ್ತಿತ್ವ ಹೊಂದಿದ್ದ ಪ್ರಗತಿಪರ ಚಿಂತಕ ಕಾರ್ನಾಡ್‍ಗೆ ಸರ್ಕಾರ ಗೌರವ ಸಲ್ಲಿಸಿದೆ ಎಂದರು.

Leave a Comment