ವಿಚಾರಣೆ ಹೋಗುತ್ತೇನೆ :  ರೆಡ್ಡಿ

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಕರೆದಾಗ ವಿಚಾರಣೆ ಹೋಗುತ್ತೇನೆ ಅಂತ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವಿಷಯ ತಿಳಿಸಿದ ಅವರು ಸ್ಪೀಕರ್ ರಮೇಶ್ ಕುಮಾರ್ ಕರೆದಾಗ ವಿಚಾರಣೆ ಹೋಗುತ್ತೇನೆ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಮಾತಿಲ್ಲ. ನಾನು ಯಾಕೆ ರಾಜೀನಾಮೆ ನೀಡಿದ್ದೇನೆ ಎಂಬ ವಿಷಯ ಪಕ್ಷದ ಎಲ್ಲ ನಾಯಕರಿಗೂ ತಿಳಿದಿದೆ ಅಂತ ಹೇಳಿದರು. ಇನ್ನು ಸ್ಪೀಕರ್ ರಮೇಶ್ ಕುಮಾರ್, ಸಲ್ಲಿಕೆಯಾದ 13 ರಾಜೀನಾಮೆಗಳ ಪೈಕಿ ಐದು ಮಾತ್ರ ಕ್ರಮಬದ್ಧವಾಗಿದ್ದು, ರಾಮಲಿಂಗಾ ರೆಡ್ಡಿ ಅವರನ್ನು ವಿಚಾರಣೆಗೆ ಸ್ಪೀಕರ್ ಜುಲೈ 15ರಂದು ಕಚೇರಿಗೆ ಆಗಮಿಸುವಂತೆ ತಿಳಿಸಿದ್ದಾರೆ.

Leave a Comment