ವಿಚಾರಣೆಗೆ ಕರೆದೋಯ್ಯುತ್ತಿದ್ದಾಗ ಕುಸಿದು ಬಿದ್ದು ವ್ಯಕ್ತಿ ಸಾವು

 

ಕಲಬುರಗಿ,ಜ.21-ಕಳ್ಳತನ ಪ್ರಕರಣ ಒಂದರಲ್ಲಿ ಕಳವಾದ ವಸ್ತುಗಳನ್ನು ಖರೀದಿ ಮಾಡಿದ ಸಂಶಯದ ಮೇಲೆ ವ್ಯಕ್ತಿಯೊಬ್ಬನನ್ನು ಕಾರವಾರ ಪೊಲೀಸರು ವಿಚಾರಣೆಗೆಂದು ಕರೆದೊಯ್ಯುತ್ತಿದ್ದಾಗ ಆತ ಏಕಾಏಕಿಯಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಗರದಲ್ಲಿಂದು ನಡೆದಿದೆ.

ನಗರದ ದರ್ಗಾ ಏರಿಯಾದ ಯಾಕೂಬ್ (35) ಮೃತಪಟ್ಟವರು.

ಕಾರವಾರದಲ್ಲಿ ನಡೆದ ಕಳ್ಳತನ ಪ್ರಕರಣ ಒಂದರಲ್ಲಿ ಕಳವಾದ ವಸ್ತುಗಳನ್ನು ಖರೀದಿ ಮಾಡಿದ ಸಂಶಯದ ಮೇಲೆ ಯಾಕೂಬ್ ನನ್ನು ವಿಚಾರಣೆ ನಡೆಸಲು ಕಾರವಾರ ಪೊಲೀಸರು ಇಲ್ಲಿಗೆ ಆಗಮಿಸಿದ್ದರು.  ಯಾಕೂಬ್ ನನ್ನು ವಿಚಾರಣೆಗೆಂದು ಕರೆದೊಯ್ಯುತ್ತಿದ್ದಾಗ ನಗರದ ಬ್ರಹ್ಮಪುರ ಪೊಲೀಸ್ ಠಾಣೆ ಹತ್ತಿರ ಯಾಕೂಬ್ ಏಕಾಏಕಿ ಕುಸಿದು ಬಿದ್ದಿದ್ದರಿಂದ ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಯಾಕೂಬ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ತಿಳಿಸಿದ್ದಾರೆ.

ಯಾಕೂಬ್ ನನ್ನು ಕಾರವಾರ ಪೊಲೀಸರು ವಿಚಾರಣೆಗೆಂದು ಕರೆದೊಯ್ಯುತ್ತಿದ್ದಾಗ ಆತನ ಸಹೋದರ ಸಹ ಅವರ ಜೊತೆಗಿದ್ದ. ಯಾಕೂಬ್ ಮೂರ್ಛೆರೋಗದಿಂದ ಬಳಲುತ್ತಿದ್ದ ಎನ್ನಲಾಗಿದೆ.

Leave a Comment