ವಿಕೆಟ್ ಕೀಪರ್ ಟಾಮ್ ಲಾಥಮ್ ಹೊಸ ದಾಖಲೆ

ಲಂಡನ್, ಜು 15- ನ್ಯೂಜಿಲೆಂಡ್ ವಿಕೆಟ್ ಕೀಪರ್ ಟಾಮ್ ಲಾಥಮ್ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿಶ್ವಕಪ್‌ನ ಬಹುಪಾಲು ಪಂದ್ಯಗಳಲ್ಲಿ ಅವರು ತಂಡದ ವಿಕೆಟ್ ಕೀಪರ್ ಆಗಿದ್ದರು. ಏಕದಿನ ವಿಶ್ವಕಪ್‌ನ ಅಂಗವಾಗಿ ಇಂಗ್ಲೆಂಡ್ ವಿರುದ್ಧದ ಮೆಗಾ ಹೋರಾಟದಲ್ಲಿ ಲಾಥಮ್ ಮೂರು ಕ್ಯಾಚ್‌ಗಳನ್ನು ಪಡೆದಿದ್ದರು
ಈ ಮೂಲಕ ಆಡಮ್ ಗಿಲ್ ಕ್ರಿಸ್ಟ್‌ ಚರ್ಚ್ (ಆಸ್ಟ್ರೇಲಿಯಾ) ಅವರ ದಾಖಲೆ ಸರಿಗಟ್ಟಿದ್ದಾರೆ. ವಿಶ್ವಕಪ್‌ ಟೂರ್ನಿಯೊಂದರಲ್ಲಿ ಹೆಚ್ಚಿನ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದ ವಿಕೆಟ್‌ಕೀಪರ್ ಎಂಬ ಖ್ಯಾತಿಗೆ ಈ ವಿಶ್ವಕಪ್‌ನಲ್ಲಿ ಲಾಥಮ್ ಭಾಜನರಾಗಿ 21 ವಿಕೆಟ್ ಹಂಚಿಕೊಂಡಿದ್ದರೆ, ಗಿಲ್‌ಕ್ರಿಸ್ಟ್ 2003 ರ ವಿಶ್ವಕಪ್‌ನಲ್ಲಿ ನಿಖರವಾಗಿ 21 ವಿಕೆಟ್ ಪಡೆದುಕೊಂಡಿದ್ದರು.
ಈ ಪಟ್ಟಿಯಲ್ಲಿ ಅಲೆಕ್ಸ್ ಕರಿ (20, 2019 ವಿಶ್ವಕಪ್) ಮತ್ತು ಕುಮಾರ ಸಂಗಕ್ಕಾರ (17, 2003 ವಿಶ್ವಕಪ್), ಗಿಲ್‌ಕ್ರಿಸ್ಟ್ ಮತ್ತು ಲಾಥಮ್ ನಂತರದ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಲಾಥಮ್ ಜೇಸನ್ ರಾಯ್, ಜೋ ರೂಟ್ ಮತ್ತು ಕ್ರಿಸ್ ವೋಕ್ಸ್ ಅವರ ಕ್ಯಾಚ್ ಗಳನ್ನು ಪಡೆದಿದ್ದರು.

Leave a Comment