ವಿಕಲಚೇತನರ ದಿನಾಚರಣೆ

ಕಲಘಟಗಿ,ಡಿ7  ವಿಕಲಚೇರನ್ನು ಮುಖ್ಯ ವಾಹಿನಿಗೆ ತರಬೇಕಾದಲ್ಲಿ ಅವರಿಗೆ ಉದ್ಯೋಗಾವಕಾಶವನ್ನು ಒದಗಿಸುವುದು ಸರ್ಕಾರದ ಆದ್ಯ ಕತ್ರ್ಯವಾಗಿದೆ ಈ ಹಿನ್ನಲೆಯಲ್ಲಿ ವಿಕಲಚೇತನರಿಗೆ ಸ್ಥಳಿಯ ಬೇಡಿಕೆಗಳನುಗುಣವಾಗಿ ಅವಶ್ಯಕ ತರಭೇತಿಯನ್ನು ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಿ ಉದ್ಯೋಗಗಳನ್ನು ಪಡೆಯಲು ಸಹಾಯ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆ ಎಮ್ ಎಪ್ ನಿರ್ದೇಶಕ ಯಲ್ಲಪ್ಪ ದಾಸನಕೋಪ್ಪ ಹೇಳಿದರು
ಅವರು ಪಟ್ಟಣದ ಬಾಲಕಿಯರ ಪ್ರೌಡ ಶಾಲೆಯಲ್ಲಿ ಜಿಲ್ಲಾ ಪಂಚಾಯತಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಕೇಂದ್ರ ಸಂಪನ್ಮೂಲ ಕೇಂದ್ರ ಕಲಘಟಗಿ ಹಾಗೂ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೂಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಹಾಕುವುದರ ಮೂಲಕ ಉಧ್ಘಾಟಿಸಿ ಮಾತನಾಡಿ ಸರ್ಕಾರ ವಿಕಲಚೇತನರ ಏಳಿಗಾಗಿ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ವಿಕಲಚೇತನರು ಆ ಎಲ್ಲ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೂಳ್ಳಬೇಕು ಎಂದರು
ನಂತರ ಮಾತನಾಡಿದ ತಾಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ ವಿಕಲಚೇತನರ ಬಗಗೆ ಅನುಕಂಪ ಪಡುವ ಬದಲು ಅವಕಾಶವನ್ನು ನೀಡುವಂತಹ ಕೆಲಸವಾಗಬೇಕು ಅಂದಾಗ ಮಾತ್ರ ಅವರಲ್ಲಿ ಇರುವ ಪ್ರತಿಭೆ ಹಾಗೂ ಸಾಮಥ್ರ್ಯ ಹೂರಬರಲು ಸಾದ್ಯವಾಗುತ್ತದೆ ವಿಕಲಚೇತನರು ಆರ್ಥಿಕ ಮತು ಸಮಾಜಿಕ ಸಬಲರಾಗುವ ನಿಟ್ಟಿನಲ್ಲಿ ಅವರಿಗೆ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ ದೂರಕಿಸಿಕೂಡಲು ಅಧಿಕಾರಿಗಳು ಹೆಚ್ಚು ಪ್ರಯತ್ನಿಸಬೇಕು ಎಂದು ಹೇಳಿದರು
ಕ್ಷೇತ್ರ ಶಿಕ್ಷಣಧಿಕಾರಿ ಎಂ ಕೆ ಮರಿಗೌಡ್ರ ತಾಪಂ ಕಾರ್ಯ ನಿರ್ವಾಹಕ ಅಧಿಕರಿ ಎಸ್ ಎಮ್ ಕಾಂಬಳೆ ಶಿಕ್ಷಣ ಸಂಯೋಜಕರಾದ ಮಹಾವೀರ ಹಂಚಿನಾಳ ಜಿಪಂ ಸದಸ್ಯರಾದ ಈರವ್ವ ದಾಸನಕೂಪ್ಪ ವಿಧ್ಯಾ ಬಾವನವರ ಅರ್ಜುನ ಲಮಾಣೆ ರಾಜು ವಾಲಿಕಾರ ಸೇರಿದಂತೆ ವಿಕಲಚೇತನ ವಿಧ್ಯಾರ್ಥಿಗಳು ಪಾಲಕರು ಶಿಕ್ಷಕ ವೃಂದ ಸಿಬ್ಬಂದಿ ಉಪಸ್ಥಿರಿದ್ದರು

Leave a Comment