ವಿಕಲಚೇತನರ ಅವಕಾಶಗಳ ಸದುಪಯೋಗಕ್ಕೆ ಕರೆ

ಬಾದಾಮಿ,ಆ1;ಸಮಾಜದಲ್ಲಿರುವ ವಿಕಲಚೇತನರ ಸಬಲೀಕರಣಕ್ಕಾಗಿ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಎಪಿಡಿ ಕಳೆದ 60 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದು, ವಿಕಲಚೇತನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಾ.ಪಂ.ಇಒ ಭೀಮಪ್ಪ ಲಾಳಿ ಹೇಳಿದರು.

 
ಅವರು ಇಲ್ಲಿನ ತಾ.ಪಂ.ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳು ಕುರಿತು ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿರುವ ವಿಕಲಚೇತನರ ಅಭ್ಯುದಯಕ್ಕಾಗಿ ಎಲ್ಲ ಇಲಾಖೆಗಳಲ್ಲಿ ಶೇ5 ರಷ್ಟು ಅನುದಾನ ಮೀಸಲಿದೆ. ಉದ್ಯೋಗದಲ್ಲಿ ಮೀಸಲಾತಿ ಇದೆ. ಗ್ರೂಪ್ ಎ, ಬಿ, ಸಿ, ಡಿ ವೃಂದದಲ್ಲಿ ಮೀಸಲಾತಿ ಇದ್ದು, ಎಲ್ಲರೂ ಇದರ ಸದುಪಯೋಗಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.

 

 

ಕಾರ್ಯಾಗಾರದಲ್ಲಿ ಸರ್ಚ ಸಂಸ್ಥೆಯ ನಿರ್ದೇಶಕ ಎಂ.ವೆಂಕಟೇಶ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಇಂತಹ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಗತಿಯನ್ನು ವಿವರಿಸಿದರು. ಬಾದಾಮಿ ತಾಲೂಕಿನ 270 ಜನರಿಗೆ ತರಬೇತಿ ನೀಡಲಾಗಿದ್ದು, ಇದರಲ್ಲಿ 166 ಜನರು ಉದ್ಯೋಗದಲ್ಲಿದ್ದಾರೆ ಎಂದರು. ವೇದಿಕೆಯ ಮೇಲೆ ಎಂ.ಆರ್.ಡಬ್ಲೂ. ಎಂ.ಎಸ್.ಪಾಟೀಲ, ಎಪಿಡಿ ಸಂಸ್ಥೆಯ ಜಿ.ಎಸ್.ಒಡೆಯರ, ನಿರ್ದೇಶಕ ಎಂ.ವೆಂಕಟೇಶ, ಸಹನಿರ್ದೇಶಕಿ ಮಂಜುಳಾ ಜೋಷಿ, ಸರ್ಚ ಸಂಸ್ಥೆಯ ಕೆ.ವಾಯ್.ನದಾಫ ಹಾಜರಿದ್ದರು. ತರಬೇತಿಯಲ್ಲಿ ತಾಲೂಕಿನ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ವಿಆರ್‍ಡಬ್ಲೂ ಗಳು ಹಾಜರಿದ್ದರು.

Leave a Comment