ವಿಂಬಲ್ಡನ್‌: 8 ವರ್ಷಗಳ ಬಳಿಕ ನಡಾಲ್‌-ಫೆಡರರ್‌ ನಾಳೆ ಮುಖಾಮುಖಿ

ಲಂಡನ್‌, ಜು 11 – ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಬುಧವಾರ ಇಲ್ಲಿ ನಡೆದಿದ್ದ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ಇಬ್ಬರೂ ಪ್ರತ್ಯೇಕ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿದ್ದಾರೆ. ವಿಶ್ವದ ಶ್ರೇಷ್ಠ ಆಟಗಾರರ ಪಂದ್ಯವನ್ನು ಕಣ್ತುಂಬಿಕೊಳ್ಳಲು ಟೆನಿಸ್‌ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅದ್ಭುತ ಪ್ರದರ್ಶನ ತೋರಿದ್ದ ನಡಾಲ್‌, ಅಮೆರಿಕದ ಸ್ಯಾಮ್‌ ಕ್ವಾರ್ರಿ ವಿರುದ್ಧ 7-5,6-2, 6-2 ಅಂತರದಲ್ಲಿ ಗೆದ್ದು ಉಪಾಂತ್ಯಕ್ಕೆ ಪ್ರವೇಶ ಮಾಡಿದರು. ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ರೋಜರ್‌ ಫೆಡೆರರ್‌ ಅವರು 4-6, 6-1, 6-4, 6-4 ಅಂತರದಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶ ಮಾಡಿದ್ದಾರೆ.

ನಡಾಲ್‌ ಹಾಗೂ ಫೆಡೆರರ್‌ ಅವರು ಕಳೆದ ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ನಡಾಲ್‌ ಗೆದ್ದು ಫೈನಲ್‌ ಪ್ರವೇಶ ಮಾಡಿದ್ದರು. ಇದೇ ವಿಶ್ವಾಸದಲ್ಲಿ ನಡಾಲ್‌ ನಾಳೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

Leave a Comment