ವಿಂಕಿ ಆರ್‌ವಿಪಿಎಸ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಧಾರವಾಡ,ಫೆ.16- ಇಲ್ಲಿಯ ಶಕ್ತಿನಗರದ ವಿಂಕಿ ಎಜ್ಯುಕೇಶನ್ ಸೊಸೈಟಿಯ ರಾಷ್ಟ್ರೀಯ ವಿದ್ಯಾನಿಧಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 22 ನೇ ವಾರ್ಷಿಕ ಸ್ನೇಹ ಸಮ್ಮೇಳನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಖ್ಯಾತ ನ್ಯಾಯವಾದಿಗಳು ಹಾಗೂ ಕರ್ನಾಟಕ ಬಾರ್ ಕೌನ್ಸಿಲ್ ಬೆಂಗಳೂರಿನ ಮಾಜಿ ಅಧ್ಯಕ್ಷ ಆನಂದಕುಮಾರ ಮಗದುಮ್ ಮುಖ್ಯ ಅತಿಯಾಗಿ ಜ್ಯೋತಿ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬರೀ ಪದವಿ ಹೊಂದಬೇಕೆಂಬ ಉದ್ದೇಶ ಹೊಂದದೇ ತಮ್ಮಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕೆಂದರು.
ಗೌರವ ಅತಿಥಿಯಾಗಿದ್ದ ಧಾರವಾಡ ಶಹರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ ಅಲಿ ಖಾಜಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಕ್ಕ ಅಮೂಲ್ಯವಾದ ವೇಳೆಯನ್ನು ವ್ಯರ್ಥವಾಗಿ ಹಾಳುಮಾಡಿಕೊಳ್ಳದೇ ಸದುಪಯೋಗಿಸಿಕೊಂಡು ಸೊಲೊಪ್ಪಿಕೊಳ್ಳದೇ ನಿಗದಿಪಡಿಸಿಕೊಂಡ ಗುರಿಯನ್ನು ತಲುಪಲು ಪ್ರಯತ್ನಗಳನ್ನು ಮಾಡುತ್ತಾ ಸದಾ ಮುನ್ನುಗುತ್ತಿರಬೇಕು ಎಂದು ಕಿವಿಮಾತು ಹೇಳಿದರು.
ಇನ್ನೊಬ್ಬ ಗೌರವ ಅತಿಥಿ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯೆ ಡಾ. ಝೇವಿಯರ ಇಸಬೆಲಾ ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಪಾಲಕರ ಪಾತ್ರ ಎಂಬ ವಿಷಯದ ಮೇಲೆ ಮಾತನಾಡಿದರು. ಧಾರವಾಡ ಮಾಳಮಡ್ಡಿ ಕ್ಲಸ್ಟರಿನ ದೀಪಾ ಸಜ್ಜನ್ ಮಕ್ಕಳ ಭವಿಷ್ಯವನ್ನು ನಿರ್ಮಿಸುವಲ್ಲಿ ತಾಯಿಯ ಪಾತ್ರ ಅತೀ ಮುಖ್ಯವೆಂದು ಹೇಳೀದರು.
ವೇದಿಕೆ ಮೇಲೆ ಶಾಲಾ ಮುಖ್ಯಸ್ಥೆ ಉಷಾ ಆರ್ ಎಂ. ಕಿರಣ್ ಜಾಧವ್, ಬಸವರಾಜ್ ಮಾರಿದ್ಯಾಮಣ್ಣವರ, ಪೂಜಾ ಗೊಂದಕರ್, ವೀಣಾ ಡಿ. ಸಿ. ಪಾಲಕರ ಸಮಿತಿ ಅಧ್ಯಕ್ಷ ಮಂಜುನಾಥ ಗುರಣ್ಣವರ ಇದ್ದರು.
ವಿಂಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ರಾಜೇಂದ್ರ ಮಾಳವದೆ ಅಧ್ಯಕ್ಷತೆ ವಹಿಸಿದ್ದರು.
ಸ್ನೇಹ ಸಮ್ಮೇಳನದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮನರಂಜನಾ ಕಾರ್ಯಕ್ರಗಳನ್ನು ಕೊಟ್ಟು ಜನರ ಮನರಂಜಿಸಿದರು.
ಶಾಲಾ ಶಿಕ್ಷಕಿಯರಾದ ವಿಮಲಾ ವೀರದಾಸರಿ, ನೇತ್ರಾವತಿ ಬಿದರಕಟ್ಟಿ, ನಾಗರತ್ನಾ ಪಾಪಳೆ ಕಾರ್ಯಕ್ರಮ ಸಂಘಟಿಸಿದರು ಮತ್ತು ಶ್ವೇತಾ ಬಂಡೆಣ್ಣವರ ಕಾರ್ಯಕ್ರಮ ನಡೆಸಿಕೊಟ್ಟರು.

Leave a Comment