ವಾ.ಕ.ರ.ಸಾ.ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಲು ಕರೆ

ಹುಬ್ಬಳ್ಳಿ, ಆ 12- ನಗರದ ವಿಶ್ವವೇಶ್ವರನಗರ ಇಂದ ಪಿಳ್ಳೆ ಸ್ಕೂಲ್ ಮಾರ್ಗವಾಗಿ ಸಿ.ಬಿ.ಟಿ ವರೆಗೆ ನಗರ ಸಾರಿಗೆ ಬಸ್ ಸಂಚಾರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ವಿ. ಡಂಗನವರ ರವರು ಶಾಲಾ ಮಕ್ಕಳೊಂದಿಗೆ ಹಾಗೂ ಬಡಾವಣೆಯ ನಾಗರಿಕರೊಂದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಾರ್ವಜನಿಕ ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ. ಸಂಚಾರ ದಟ್ಟಣೆಯಿಂದ ನಗರದ ಪರಿಸರ ಮಾಲಿನ್ಯವು ದಿನ ದಿಂದ ದಿನಕ್ಕೆ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಮತ್ತು ಪರಿಸರ ಮಾಲಿನ್ಯವನ್ನು ಸಂರಕ್ಷಿಸಲು, ಪ್ರತಿಯೊಬ್ಬ ವಿದ್ಯಾರ್ಥಿಗಳು/ಸಾರ್ವಜನಿಕರು ಹಾಗೂ ನಾಗರಿಕರು ವಾಯವ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಹಕರಿಸಬೇಕೆಂದು ಸಂಸ್ಥೆಯ ಅಧ್ಯಕ್ಷರು ಕೋರಿದರು.
ಈ ಸಂದರ್ಭದಲ್ಲಿ ರಾಜಾ ದೇಸಾಯಿ, ಕಾಂಗ್ರೆಸ್ ಮುಖಂಡರು, ರಾಜಣ್ಣ ಪವಾರ, ಕದಂ ಪಿಳ್ಳೆ ಸ್ಕೂಲ್ ಪ್ರಾಚಾರ್ಯರರು ಹಾಗೂ ಹುಬ್ಬಳ್ಳಿ ವಿಭಾಗದ ವಿಭಾಗೀಯ ಸಾರಿಗೆ  ಚಾಲನೆ
ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಸಾಯಿನಗರದಿಂದ ಇಂಡಸ್ಟ್ರಿಯಲ್ ಏರಿಯಾ ಮಾರ್ಗವಾಗಿ ಗೋಕುಲಕ್ಕೆ ಮಿನಿ ಬಸ್ ನಗರ ಸಾರಿಗೆ ಬಸ್ ಸಂಚಾರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ವಿ. ಡಂಗನವರ ರವರು ಬಡಾವಣೆಯ ನಾಗರಿಕರೊಂದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

Leave a Comment