ವಾಹನ ಸವಾರರ ದಂಡ, ಶುಲ್ಕ ದುಬಾರಿ-ಹಿಂಪಡೆಯಲು ಮನವಿ

ರಾಯಚೂರು.ಸೆ.12- ಮೋಟಾರು ವಾಹನ ಹೊಸ ಕಾಯ್ದೆಯು ಸವಾರರಿಗೆ ಹೊಸ ನಿಯಮದ ದಂಡದ ಶುಲ್ಕವು ದುಬಾರಿಯಾಗುತ್ತಿದ್ದು, ಕೂಡಲೇ ಮುಖ್ಯಮಂತ್ರಿಯವರು ಶುಲ್ಕಕ್ಕೆ ಕಡಿವಾಣ ಹಾಕಬೇಕೆಂದು ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ ಒತ್ತಾಯಿಸಿದರು.
ಅವರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರಿಗೆ ಮತ್ತು ದಂಡ ಶುಲ್ಕದ ಹೊಸ ನಿಯಮವು ಸಾರ್ವಜನಿಕರಿಂದ ಯಾವುದೇ ಲೈಸನ್ಸ್, ಇನ್ಸೂರೆನ್ಸ್ ಹಾಗೂ ಇನ್ನಿತರ ದಾಖಲಾತಿ ಪತ್ರಗಳು ಇಲ್ಲವೆಂದು ಅನಧಿಕೃತ ದಂಡ, ಶುಲ್ಕ ವಸೂಲಿ ಮಾಡುತ್ತಿದ್ದಾರೆಂದು ದೂರಿದರು. ಇನ್ನಿತರ ಕೆಲಸಕ್ಕೆ ನಗರಕ್ಕಾಗಮಿಸುವ ಸವಾರರಿಗೆ 5 ಸಾವಿರದಿಂದ 10 ಸಾವಿರ ದಂಡ ಹಾಕುವುದು ಸಮಂಜಸವಲ್ಲಯೆಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆಂದು ತಿಳಿಸಿದರು.
ಮಳೆ ಹಾಗೂ ಬೆಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದು, ವಿದ್ಯಾವಂತರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ದಿನಗೂಲಿ ಕೆಲಸ ಮಾಡುವ ಕಾರ್ಮಿಕರು ಕುಟುಂಬ ನಿವಾರಣೆಗೆ ನಡೆಸುವುದು ಕಷ್ಟವಾಗಿದ್ದು, ಇಂತಹ ಸಂದರ್ಭದಲ್ಲಿ ವಾಹನ ಸವಾರರಿಗೆ ದಂಡ ಶುಲ್ಕ ದುಬಾರಿಯಾಗಿ ವಸೂಲಿ ಮಾಡುವುದು ಖಂಡನೀಯವಾಗಿದೆ. ಸರ್ಕಾರವು ಹೊಸ ನಿಯಮ, ದಂಡದ ಶುಲ್ಕವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಮರಯ್ಯ ಸ್ವಾಮಿ, ಮಹೇಶ್ ಕುಮಾರ್, ಕುಮಾರಸ್ವಾಮಿ, ರವಿಚಂದ್ರ, ಮುತ್ತುರಾಜ್, ಬಂದೆ ನವಾಜ್ ಉಪಸ್ಥಿತರಿದ್ದರು.

Leave a Comment